May 16, 2026
Saturday, May 16, 2026
spot_img

SUMMER SPECIAL | ಈ ಮ್ಯಾಂಗೋ ಮೂಸ್ ತಿಂದ್ರೆ ಮನಸ್ಸು, ಹೊಟ್ಟೆ ಎರಡೂ ತಂಪಾಗುತ್ತೆ ಪಕ್ಕಾ

ಬೇಸಿಗೆಯ ಬಿಸಿಲಿನಲ್ಲಿ ತಂಪಾದ, ಲೈಟ್ ಮತ್ತು ಸಿಹಿಯಾದ ಡೆಸರ್ಟ್ ಬೇಕಾ? ಹಾಗಿದ್ರೆ ಮ್ಯಾಂಗೋ ಮೂಸ್ ನಿಮಗೆ ಪರ್ಫೆಕ್ಟ್. ಮಾಗಿದ ಮಾವಿನಹಣ್ಣಿನ ಸಿಹಿ ರುಚಿ ಮತ್ತು ಮೃದುವಾದ ಕ್ರೀಮ್ ಈ ಡೆಸರ್ಟ್ ಬಾಯಲ್ಲಿ ಕರಗುವಂತೆ ಮಾಡುತ್ತೆ. ಕಡಿಮೆ ಪದಾರ್ಥಗಳಲ್ಲಿ, ಕಡಿಮೆ ಸಮಯದಲ್ಲಿ ತಯಾರಾಗುವ ಈ ರೆಸಿಪಿ ಬೇಸಿಗೆಗೆ ರಿಫ್ರೆಶಿಂಗ್ ಟ್ರೀಟ್.

ಬೇಕಾಗುವ ಪದಾರ್ಥಗಳು
ಮಾವಿನಹಣ್ಣು – 2-3
ವಿಪ್ಪಿಂಗ್ ಕ್ರೀಮ್ – 1 ಕಪ್
ಸಕ್ಕರೆ / ಜೇನುತುಪ್ಪ – 2-3 ಟೇಬಲ್ ಸ್ಪೂನ್
ವೆನಿಲ್ಲಾ ಎಸೆನ್ಸ್ – ಸ್ವಲ್ಪ

ತಯಾರಿಸುವ ವಿಧಾನ:

ಮೊದಲು ಮಾವಿನಹಣ್ಣುಗಳನ್ನು ತೊಳೆದು, ಸಿಪ್ಪೆ ತೆಗೆದು ತುಂಡು ಮಾಡಿ ಮಿಕ್ಸಿಯಲ್ಲಿ ನುಣ್ಣಗೆ ಪ್ಯೂರಿ ತಯಾರಿಸಿಕೊಳ್ಳಿ.
ಈಗ ಒಂದು ಬೌಲಿನಲ್ಲಿ ವಿಪ್ಪಿಂಗ್ ಕ್ರೀಮ್ ಹಾಕಿ, ಗಟ್ಟಿಯಾದ ಸ್ಟಿಫ್ ಪೀಕ್ಸ್ ಬರುವವರೆಗೆ ಚೆನ್ನಾಗಿ ಬೀಟ್ ಮಾಡಿ.

ತಯಾರಾದ ಮಾವಿನ ಪ್ಯೂರಿಯನ್ನು ನಿಧಾನವಾಗಿ ಕ್ರೀಮ್‌ಗೆ ಸೇರಿಸಿ, ಲೈಟ್ ಆಗಿ ಫೋಲ್ಡ್ ಮಾಡಿ (ಜಾಸ್ತಿ ಕಲಸಬೇಡಿ).
ಬೇಕಾದರೆ ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಸರ್ವಿಂಗ್ ಗ್ಲಾಸ್ ಅಥವಾ ಬೌಲಿನಲ್ಲಿ ಹಾಕಿ.

ಕನಿಷ್ಠ 1-2 ಗಂಟೆಗಳ ಕಾಲ ಫ್ರಿಜ್‌ನಲ್ಲಿ ಇಟ್ಟು ಸೆಟ್ ಆಗಲು ಬಿಡಿ. ನಂತರ ತಂಪಾದ ಮ್ಯಾಂಗೋ ಮೂಸ್ ಅನ್ನು ಮೇಲೆ ಮಾವಿನ ತುಂಡುಗಳು ಅಥವಾ ಡ್ರೈಫ್ರೂಟ್ಸ್ ಹಾಕಿ ಸರ್ವ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !