April 20, 2026
Monday, April 20, 2026
spot_img

ಪ್ರಿಯಾಂಶ್, ಕೊನೊಲಿ ಬ್ಯಾಟಿಂಗ್ ಅಬ್ಬರಕ್ಕೆ ನಡುಗಿದ ಲಖನೌ ಬೌಲರ್ಸ್: ಪಂತ್ ಬಳಗಕ್ಕೆ ಬಿಗ್ ಟಾರ್ಗೆಟ್ ನೀಡಿದ ಪಂಜಾಬ್​

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಿಯಾಂಶ್ ಆರ್ಯ, ಕೂಪರ್ ಕೊನೊಲಿ ಬ್ಯಾಟಿಂಗ್ ಅಬ್ಬರಕ್ಕೆ ಲಖನೌ ಬೌಲರ್ಸ್ ಗಳು ನಡುಗಿದ್ದು, ನಿಗದಿತ 20 ಓವರ್ ಗಳಲ್ಲಿ ಪಂಜಾಬ್ ಕಿಂಗ್ಸ್ ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಪಂಜಾಬ್​ ಕಿಂಗ್ಸ್ ಗೆ ಆರಂಭದಲ್ಲೇ ಪ್ರಭಸಿಮ್ರನ್ ಸಿಂಗ್​ ಕೈಕೊಟ್ಟಿದ್ದು, ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಕಡೆ ಸಾಗಿದರು.

ಬಳಿಕ ಜೊತೆಯಾ ಪ್ರಿಯಾಂಶ್ ಆರ್ಯ ಹಾಗೂ ಕೂಪರ್ ಕೊನೊಲಿ ಲಖನೌ ಬೌಲರ್ಸ್ ಗಳನ್ನು ಮನಬಂದಂತೆ ದಂಡಿಸಿದರು. ಈ ಜೋಡಿ ಬರೋಬ್ಬರಿ 182 ರನ್​ಗಳ ಜೊತೆಯಾಟ ಆಡಿತು

ಇತ್ತ ಶತಕದತ್ತ ತಲುಪುತ್ತಿದ್ದಂತೆ ಕೊನೊಲಿ 87 ರನ್​ಗಳಿಸಿ ಔಟ್ ಆದರು. ಇದರ ಬೆನ್ನಲ್ಲೇ ಪ್ರಿಯಾಂಶ್ ಆರ್ಯ ಕೂಡ 93 ರನ್​ಗಳಿಸಿ ಶತಕ ವಂಚಿತರಾದರು.

ಬಳಿಕ ಬಂದ ನಾಯಕ , ಶ್ರೇಯಸ್ ಅಯ್ಯರ್ ಕೇವಲ 5 ರನ್​ ಗಳಿಸಿದರೆ, ಉಳಿದಂತೆ ಮಾರ್ಕಸ್ ಸ್ಟೋಯ್ನಿಸ್ 29, ಶಶಾಂಕ್ ಸಿಂಗ್ 17, ನೆಹಾಲ್ ವಧೇರಾ 11 ರನ್ ಗಳಿಸಿ ತಂಡದ ಮೊತ್ತವನ್ನು 250 ರ ಗಡಿ ದಾಟಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !