July 4, 2026
Saturday, July 4, 2026
spot_img

ಪರಮಾಣು ಹಕ್ಕು ಕಸಿಯುವ ಅಧಿಕಾರ ಯಾರಿಗೂ ಇಲ್ಲ: ಟ್ರಂಪ್‌ ವಿರುದ್ಧ ಗುಡುಗಿದ ಇರಾನ್ ಅಧ್ಯಕ್ಷ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಕದನ ಮತ್ತಷ್ಟು ತ್ರೀವಗೊಳ್ಳುತ್ತಿದ್ದು, ಒಂದೆಡೆ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿ ಜಗತ್ತಿಗೆ ದೊಡ್ಡ ಹೊಡೆತ ನೀಡಿರುವ ಇರಾನ್ ,ಮತ್ತೆ ಅಮೆರಿಕ ವಿರುದ್ಧ ಗುಡುಗಿದೆ.

ಡೊನಾಲ್ಡ್ ಟ್ರಂಪ್‌ ವಿರುದ್ಧ ಆಕ್ರೋಶ ಹೊರಹಾಕಿದ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ತಮ್ಮ ಬಳಿ ಇರುವ ಪರಮಾಣು ಹಕ್ಕುಗಳನ್ನು ಕಸಿಯುವ ಅಧಿಕಾರ ಯಾರಿಗೂ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಪರಮಾಣು ಹಕ್ಕುಗಳನ್ನು ಇರಾನ್ ಬಳಸಬಾರದು ಎಂದ ಟ್ರಂಪ್ ಮಾತಿಗೆ ಗುಡುಗಿದ ಪೆಜೆಶ್ಕಿಯಾನ್, ಯಾವುದೇ ಏಕಪಕ್ಷೀಯ ನಿರ್ಧಾರ ಒಂದು ರಾಷ್ಟ್ರದ ಹಕ್ಕನ್ನು ಕಸಿಯಲು ಸಾಧ್ಯವಿಲ್ಲ. ನಾವು ಯಾರ ಜೊತೆಯೂ ಯುದ್ಧ ನಡೆಯಬೇಕೆಂದು ಬಯಸುವುದಿಲ್ಲ. ಆದರೆ ಅಮೆರಿಕ ಹಾಗೂ ಇಸ್ರೇಲ್ ದಾಳಿಗಳ ವಿರುದ್ಧ ನಾವು ಪ್ರತಿದಾಳಿ ನಡೆಸಿದ್ದೇವೆ. ಇದು ಕೇವಲ ನಮ್ಮ ಆತ್ಮರಕ್ಷಣೆಗಾಗಿ ಮಾತ್ರ ಎಂದು ಹೇಳಿದರು.

ಈಗಾಗಲೇ ಅಮೆರಿಕ ಹೇರಿರುವ ನೌಕಾ ದಿಗ್ಬಂಧನ ವಿರುದ್ಧ ತಿರುಗಿನಿಂತಿರುವ ಇರಾನ್ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದ್ದು , ಇದರ ಜೊತೆಗೆ ಭಾರತದ ಧ್ವಜ ಹೊಂದಿದ್ದ ಎರಡು ವಾಣಿಜ್ಯ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿವೆ. ಈ ಬೆನ್ನಲ್ಲೇ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !