ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಂತ್ರಿಕ ದೋಷದಿಂದ ನಿಯಂತ್ರಣ ಕಳೆದುಕೊಂಡ ವಿಮಾನವೊಂದು ಬರೋಬ್ಬರಿ ನಾಲ್ಕು ಗಂಟೆ ಆಕಾಶದಲ್ಲಿಯೇ ಸುತ್ತಾಟ ನಡೆಸಿದೆ.
ಹುಬ್ಬಳ್ಳಿಯಲ್ಲಿ ಈ ಘಟನೆ ನಡೆದಿದ್ದು, ವಿಮಾನದಲ್ಲಿದ್ದ ಜನ ತಮ್ಮ ಕಡೆಯ ದಿನ ಎಂದು ಕಣ್ಣೀರಿಟ್ಟಿದ್ದಾರೆ. Fly91 ಏರ್‌ಲೈನ್ಸ್ IC3401 ಸಂಖ್ಯೆ ಫ್ಲೈಟ್ ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿತ್ತು. ಸಂಜೆ ನಾಲ್ಕುವರೆಗೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಇನ್ನೇನು ಹುಬ್ಬಳ್ಳಿ ಬಂತು ಎನ್ನುತ್ತಿದ್ದಂತೆಯೇ ಏಕಾಏಕಿ ತಾಂತ್ರಿಕ ದೋಷ ಕಾಣಿಸಿದೆ.
ಇದರಿಂದಾಗಿ ನಿಯಂತ್ರಣ ಕಳೆದುಕೊಂಡ ವಿಮಾನ ಲ್ಯಾಂಡ್ ಆಗದೇ ನಾಲ್ಕು ಗಂಟೆ ಆಕಾಶದಲ್ಲಿಯೇ ರೌಂಡ್ ಹೊಡೆದಿದೆ. ಮುಂಡಗೋಡ, ದಾವಣಗೆರೆ ಹಾಗೂ ಶಿವಮೊಗ್ಗದಲ್ಲಿ ಸುತ್ತಾಟ ನಡೆದಿದೆ. ಎಲ್ಲಯೂ ಲ್ಯಾಂಡ್ ಆಗದೇ ಸಂಜೆ 7:30ಕ್ಕೆ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿದೆ.
ನಾಲ್ಕು ಗಂಟೆಗಳ ಕಾಲ ಜೀವ ಕೈಯಲ್ಲೇ ಹಿಡಿದುಕೊಂಡಿದ್ದ ಜನರಿಗೆ ಜೀವ ಬಂದಂತಾಗಿದೆ. ನಾವಿನ್ನು ಬದುಕೋದಿಲ್ಲ ಗುಡ್‌ಬೈ ಎಂದು ಜನ ಕುಟುಂಬದವರಿಗೆ ಸಂದೇಶ ಕಳುಹಿಸಿದ್ದಾರೆ. ಆದರೆ ಪ್ರಕರಣ ಸುಖಾಂತ್ಯವಾಗಿದ್ದು, ಎಲ್ಲರೂ ಸೇಫ್ ಆಗಿದ್ದಾರೆ.



