ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಜಗತ್ತಿನಲ್ಲಿ ಟಿ20 ಲೀಗ್‌ಗಳ ವಿಸ್ತರಣೆ ಮುಂದುವರಿದಿದ್ದು, ಇದೀಗ ಯುರೋಪ್‌ನಲ್ಲಿ ಹೊಸ ಟೂರ್ನಿಗೆ ವೇದಿಕೆ ಸಿದ್ಧವಾಗಿದೆ. ಶೀಘ್ರದಲ್ಲೇ ಆರಂಭವಾಗಲಿರುವ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ETPL) ಈಗಾಗಲೇ ಜಾಗತಿಕ ಗಮನ ಸೆಳೆಯುತ್ತಿದೆ.
ಈ ಲೀಗ್‌ಗೆ ಅಭಿಷೇಕ್ ಬಚ್ಚನ್ ಸೇರಿದಂತೆ ಹಲವು ಹೂಡಿಕೆದಾರರು ಬೆಂಬಲ ನೀಡಿದ್ದು, ಫ್ರಾಂಚೈಸಿ ಮಾದರಿಯಲ್ಲಿ ಆಯೋಜನೆಗೊಳ್ಳಲಿದೆ. ವಿಶೇಷವಾಗಿ, ಕ್ರಿಸ್ ಗೇಲ್ ಗ್ಲ್ಯಾಸ್ಗೋ ತಂಡದ ಸಹ-ಮಾಲೀಕರಾಗಿ ಸೇರ್ಪಡೆಗೊಂಡಿರುವುದು ಈ ಟೂರ್ನಿಗೆ ಮತ್ತಷ್ಟು ಮೆರುಗು ತಂದಿದೆ. ‘ಗ್ಲ್ಯಾಸ್ಗೋ ಮುಗಾಫಿಯನ್ಸ್’ ತಂಡದ ಜಾಗತಿಕ ರಾಯಭಾರಿಯಾಗಿ ಕೂಡ ಅವರು ಕಾರ್ಯನಿರ್ವಹಿಸಲಿದ್ದಾರೆ.
ಲೀಗ್‌ನ ಚೊಚ್ಚಲ ಸೀಸನ್ ಆಗಸ್ಟ್ 26ರಿಂದ ಸೆಪ್ಟೆಂಬರ್ 20ರವರೆಗೆ ನಡೆಯಲಿದ್ದು, ಗ್ಲ್ಯಾಸ್ಗೋ, ಡಬ್ಲಿನ್, ಆಮ್‌ಸ್ಟರ್‌ಡ್ಯಾಮ್ ಸೇರಿದಂತೆ ಆರು ನಗರಗಳ ತಂಡಗಳು ಸ್ಪರ್ಧಿಸಲಿವೆ. ಈ ಟೂರ್ನಿ International Cricket Council ಮಾನ್ಯತೆ ಪಡೆದ ಯುರೋಪ್‌ನ ಮೊದಲ ಫ್ರಾಂಚೈಸಿ ಟಿ20 ಲೀಗ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ:
ಇದಕ್ಕೂ ಮುನ್ನವೇ ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಿಚೆಲ್ ಮಾರ್ಷ್ ಅವರಂತಹ ಆಟಗಾರರು ಲೀಗ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಮೂಡಿಸಿದ್ದು, ಟೂರ್ನಿಯ ಮಟ್ಟವನ್ನು ಹೆಚ್ಚಿಸಿದೆ.
ಕ್ರಿಸ್ ಗೇಲ್ ಸೇರ್ಪಡೆಯಿಂದ ವೆಸ್ಟ್ ಇಂಡೀಸ್‌ನ ಇತರೆ ಸ್ಟಾರ್ ಆಟಗಾರರು ಸಹ ಈ ಲೀಗ್ ಕಡೆ ಮುಖ ಮಾಡುವ ಸಾಧ್ಯತೆ ಇದ್ದು, ಯುರೋಪ್‌ನಲ್ಲಿ ಕ್ರಿಕೆಟ್ ಬೆಳವಣಿಗೆಗೆ ಇದು ಮಹತ್ವದ ಹೆಜ್ಜೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.



