April 20, 2026
Monday, April 20, 2026
spot_img

Summer Drink | ಬೇಸಿಗೆಯಲ್ಲಿ ತಂಪು ನೀಡುವ ಹುಣಸೆಹಣ್ಣಿನ ಪಾನಕ: ಒಮ್ಮೆ ಟ್ರೈ ಮಾಡಿ

ಬಿಸಿಲಿನ ತಾಪ ಹೆಚ್ಚಾದಾಗ ದೇಹಕ್ಕೆ ತಂಪು ನೀಡುವ, ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುವ ನೈಸರ್ಗಿಕ ಪಾನೀಯ ಬೇಕು ಅಂದ್ರೆ ಹುಣಸೆಹಣ್ಣಿನ ಪಾನಕ ಸೂಪರ್ ಆಯ್ಕೆ. ಸಾಂಪ್ರದಾಯಿಕ ರುಚಿಯ ಜೊತೆ ಆರೋಗ್ಯಕ್ಕೂ ಲಾಭ ನೀಡುವ ಈ ಪಾನಕ, ಬೇಸಿಗೆಯಲ್ಲಿ ಮನೆಮದ್ದಿನಂತೇ ಕೆಲಸ ಮಾಡುತ್ತದೆ.

ಬೇಕಾಗುವ ಪದಾರ್ಥಗಳು:

ಹುಣಸೆಹಣ್ಣು – ಒಂದು ಸಣ್ಣ ಲಿಂಬೆ ಗಾತ್ರ
ಬೆಲ್ಲ ಅಥವಾ ಸಕ್ಕರೆ – 3-4 ಟೇಬಲ್ ಸ್ಪೂನ್
ಏಲಕ್ಕಿ ಪುಡಿ – ¼ ಟೀ ಸ್ಪೂನ್
ಉಪ್ಪು – ಒಂದು ಚಿಟಿಕೆ
ನೀರು – 2-3 ಕಪ್

ತಯಾರಿಸುವ ವಿಧಾನ:

ಹುಣಸೆಹಣ್ಣನ್ನು ಬಿಸಿ ನೀರಿನಲ್ಲಿ 20-30 ನಿಮಿಷ ನೆನೆಸಿಡಿ. ನೆನೆಸಿದ ಹುಣಸೆಹಣ್ಣನ್ನು ಚೆನ್ನಾಗಿ ಕಿವುಚಿ, ತಿರುಳನ್ನು ಬೇರ್ಪಡಿಸಿ ಸೋಸಿಕೊಳ್ಳಿ. ಈ ತಿರುಳಿಗೆ ಬೆಲ್ಲ/ಸಕ್ಕರೆ, ಉಪ್ಪು ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ.

ಅಗತ್ಯವಿದ್ದರೆ ಇನ್ನಷ್ಟು ನೀರು ಸೇರಿಸಿ ರುಚಿ ಮತ್ತು ದಪ್ಪ ಸರಿಪಡಿಸಿ. ಫ್ರಿಜ್‌ನಲ್ಲಿ ಸ್ವಲ್ಪ ತಂಪಾಗಿಸಿ ಅಥವಾ ಐಸ್ ಕ್ಯೂಬ್‌ಗಳೊಂದಿಗೆ ಸರ್ವ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !