August 26, 2026
Wednesday, August 26, 2026
spot_img

CINE | ‘ಧುರಂಧರ್ 2’ ಓಟಕ್ಕೆ ಬ್ರೇಕ್ ಹಾಕಿದ ‘ಭೂತ್ ಬಂಗ್ಲ’: ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಟ ಮುಂದುವರಿಸುತ್ತಿದ್ದ ಧುರಂಧರ್ 2 ಚಿತ್ರಕ್ಕೆ ಇದೀಗ ಹೊಸ ಸ್ಪರ್ಧೆ ಎದುರಾಗಿದೆ. ಒಂದು ತಿಂಗಳಿನಿಂದ ಸ್ಥಿರವಾದ ಕಲೆಕ್ಷನ್ ದಾಖಲಿಸುತ್ತಿದ್ದ ಈ ಸಿನಿಮಾದ ವೇಗಕ್ಕೆ ಭೂತ್ ಬಂಗ್ಲ ಬಿಡುಗಡೆ ಬ್ರೇಕ್ ಹಾಕಿದಂತಾಗಿದೆ.

ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಮಾರ್ಚ್ 19ರಂದು ತೆರೆಗೆ ಬಂದಿದ್ದು, 30 ದಿನಗಳಲ್ಲಿ ಜಾಗತಿಕವಾಗಿ 1756 ಕೋಟಿ ಗಳಿಕೆ ಮಾಡಿದೆ. ಭಾರತದಲ್ಲಿ ಮಾತ್ರವೇ 1335 ಕೋಟಿ ಕಲೆಕ್ಷನ್ ಮಾಡಿರುವ ಈ ಸಿನಿಮಾ, ಇತ್ತೀಚಿನ ಭಾನುವಾರ 4 ಕೋಟಿ ಗಳಿಕೆಗೆ ಇಳಿದಿದೆ. ಇದಕ್ಕೂ ಮುಂಚಿನ ವಾರ ಇದೇ ದಿನ 17 ಕೋಟಿ ಗಳಿಸಿದ್ದನ್ನು ಹೋಲಿಸಿದರೆ ಸ್ಪಷ್ಟ ಕುಸಿತ ಕಂಡುಬಂದಿದೆ.

ಇದನ್ನೂ ಓದಿ:

ಇದಕ್ಕೆ ಪ್ರಮುಖ ಕಾರಣವಾಗಿ ಅಕ್ಷಯ್ ಕುಮಾರ್ ನಟನೆಯ ‘ಭೂತ್ ಬಂಗ್ಲ’ ಸಿನಿಮಾ ಎಂಟ್ರಿ ನೀಡಿರುವುದು ಹೇಳಲಾಗುತ್ತಿದೆ. ಏಪ್ರಿಲ್ 17ರಂದು ಬಿಡುಗಡೆಯಾದ ಈ ಚಿತ್ರ ಭಾನುವಾರವೇ 23 ಕೋಟಿ ಗಳಿಕೆ ಮಾಡಿದ್ದು, ಥಿಯೇಟರ್‌ಗಳಲ್ಲಿ ಹೆಚ್ಚಿನ ಶೋಗಳನ್ನು ತನ್ನತ್ತ ಸೆಳೆದಿದೆ. ಇದರಿಂದ ‘ಧುರಂಧರ್ 2’ಗೆ ಸಿಗುತ್ತಿದ್ದ ಪ್ರದರ್ಶನಗಳ ಸಂಖ್ಯೆ ಕಡಿಮೆಯಾಗಿದೆ.

‘ಭೂತ್ ಬಂಗ್ಲ’ ಸಿನಿಮಾದಲ್ಲಿ ರಾಜ್‌ಪಾಲ್ ಯಾದವ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದು, ಈಗಾಗಲೇ 95 ಕೋಟಿ ವಿಶ್ವ ಮಟ್ಟದ ಕಲೆಕ್ಷನ್ ದಾಖಲಿಸಿದೆ. ಒಟ್ಟಿನಲ್ಲಿ, ಎರಡೂ ಸಿನಿಮಾಗಳ ನಡುವಿನ ಸ್ಪರ್ಧೆ ಬಾಲಿವುಡ್ ಬಾಕ್ಸ್ ಆಫೀಸ್‌ಗೆ ಹೊಸ ಚೈತನ್ಯ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !