October 10, 2026
Saturday, October 10, 2026
spot_img

ಮಧ್ಯಪ್ರಾಚ್ಯ ಕದನಕ್ಕೆ ಚೀನಾ ಎಂಟ್ರಿ: ಹಾರ್ಮುಜ್ ಜಲಮಾರ್ಗ ಮುಕ್ತಗೊಳಿಸುವಂತೆ ಕರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯ ಸಂಘರ್ಷ ತಾರಕಕ್ಕೇರಿದ್ದು, ಅಮೆರಿಕ, ಇರಾನ್ ನಡುವಿನ ಕದನದಿಂದಾಗಿ ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದು, ಇದರ ನಡುವೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಹಡಗುಗಳ ಮುಕ್ತ ಸಂಚಾರಕ್ಕೆ ಜಲಸಂಧಿ ತೆರೆಯುವಂತೆ ಕರೆ ನೀಡಿದ್ದಾರೆ.

ಈ ಕುರಿತು ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಜೊತೆ ದೂರವಾಣಿ ಕರೆಯಲ್ಲಿ ಮಾತನಾಡಿದ ಜಿನ್‌ಪಿಂಗ್, ಹಾರ್ಮುಜ್ ಜಲಸಂಧಿ ಅಂತಾರಾಷ್ಟ್ರಿಯ ಜಲಮಾರ್ಗವಾಗಿದ್ದು, ಇದು ಯಾರ ಹಕ್ಕಿನ ಮೇಲೆ ನಿಂತಿಲ್ಲ. ಹೀಗಾಗಿ ಹಡಗುಗಳ ಮುಕ್ತ ಸಂಚಾರಕ್ಕೆ ಸಡಿಲವಾಗಬೇಕೆಂದು ತಿಳಿಸಿದರು.

ಸದ್ಯ ಜಲಸಂಧಿಯ ಮೇಲೆ ಇರಾನ್ ನಿರ್ಬಂಧ ಹೇರಿದ್ದು, ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆಯಲ್ಲಿ ಅಡೆತಡೆಗಳು ಉಂಟಾಗಿದೆ. ಈ ಹಿನ್ನೆಲೆ ಸಂಘರ್ಷಕ್ಕೆ ವಿರಾಮ ಹಾಡಿ ಶಾಂತಿಯನ್ನು ಸ್ಥಾಪಿಸಬೇಕು. ಇಂತಹ ಕಾರ್ಯಗಳಿಗೆ ಬೆಂಬಲ ಇರಲಿದ್ದು, ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.

Must Read