July 15, 2026
Wednesday, July 15, 2026
spot_img

ಝಾಂಬಿ ಡ್ರಗ್ಸ್ ವಿಡಿಯೋ ವಿವಾದ: ದುನಿಯಾ ವಿಜಿಗೆ ಹೆಚ್ಚಿದ ‘ಕಾನೂನು ಟೆನ್ಶನ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ‘ಝಾಂಬಿ ಡ್ರಗ್ಸ್’ ಸಂಬಂಧಿತ ವಿಡಿಯೋ ಇದೀಗ ಹೊಸ ತಿರುವು ಪಡೆದಿದ್ದು, ನಟ ದುನಿಯಾ ವಿಜಯ್ ಅವರಿಗೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಿದೆ. ತಪ್ಪು ಮಾಹಿತಿ ಎಂಬುದು ಗೊತ್ತಾದ ನಂತರ ವಿಡಿಯೋವನ್ನು ಅಳಿಸಿದ್ದರೂ, ಪ್ರಕರಣ ಇಲ್ಲಿ ನಿಂತಿಲ್ಲ.

ಬಾಗಲೂರು ಪೊಲೀಸರು ಡಿಲೀಟ್ ಮಾಡಲಾದ ವಿಡಿಯೋವನ್ನು ಮರುಪಡೆಯಲು ಇನ್‌ಸ್ಟಾಗ್ರಾಂ ಸಂಸ್ಥೆಗೆ ಪತ್ರ ಬರೆದಿದ್ದು, ವಿಚಾರಣೆಯನ್ನು ಮುಂದುವರಿಸಿದ್ದಾರೆ. ಇದೇ ವಿಡಿಯೋವನ್ನು ಹಂಚಿಕೊಂಡಿದ್ದ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೂ ಇದೇ ಸಮಸ್ಯೆ ಎದುರಾಗುವ ಸೂಚನೆಗಳಿವೆ.

ಇದನ್ನೂ ಓದಿ:

ವಿಡಿಯೋ ಕುರಿತು ಯಾವುದೇ ದೃಢ ಮಾಹಿತಿ ಪಡೆಯದೆ ಹಂಚಿಕೊಂಡಿರುವ ಆರೋಪದಡಿ ಈಗಾಗಲೇ 15 ಮಂದಿಗೆ ನೋಟಿಸ್ ನೀಡಲಾಗಿದೆ. ವಿಡಿಯೋ ಮರುಪಡೆದ ಬಳಿಕ ದುನಿಯಾ ವಿಜಯ್ ಮತ್ತು ಭಾಸ್ಕರ್ ರಾವ್ ಅವರಿಗೆ ಸಹ ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವೈರಲ್ ಕ್ಲಿಪ್‌ನಲ್ಲಿ ವ್ಯಕ್ತಿಯೊಬ್ಬ ಅಸಹಜವಾಗಿ ವರ್ತಿಸುತ್ತಿರುವ ದೃಶ್ಯಗಳು ಕಾಣಿಸಿಕೊಂಡಿದ್ದು, ಇದನ್ನು ‘ಝಾಂಬಿ ಡ್ರಗ್ಸ್’ ಪರಿಣಾಮ ಎಂದು ಹೇಳಲಾಗಿತ್ತು. ಆದರೆ ನಗರದಲ್ಲಿ ಇಂತಹ ಯಾವುದೇ ಮಾದಕ ಪದಾರ್ಥ ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸುಳ್ಳು ಮಾಹಿತಿ ಹರಡುವಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಪ್ರಕರಣದ ತನಿಖೆ ಮುಂದುವರಿಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !