October 10, 2026
Saturday, October 10, 2026
spot_img

CINE | ಬಾಕ್ಸ್ ಆಫೀಸ್‌ನಲ್ಲಿ ಸೆಂಚುರಿ ಹೊಡೆದ ‘ಭೂತ್ ಬಂಗ್ಲ’: ಅಬ್ಬಬ್ಬಾ… 3 ದಿನಕ್ಕೆ ಇಷ್ಟೊಂದು ಕಲೆಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರಮಂದಿರಗಳಲ್ಲಿ ಹೊಸ ಹವಾ ಸೃಷ್ಟಿಸಿರುವ ‘ಭೂತ್ ಬಂಗ್ಲ’ ಸಿನಿಮಾ ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ಭರ್ಜರಿ ಕಲೆಕ್ಷನ್ ಮೂಲಕ ಗಮನ ಸೆಳೆದಿದೆ. ದೀರ್ಘ ವಿರಾಮದ ಬಳಿಕ ನಟ ಅಕ್ಷಯ್ ಕುಮಾರ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಒಂದಾಗಿ ಬಂದಿರುವ ಈ ಚಿತ್ರ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ.

ಬಾಲಾಜಿ ಮೋಷನ್ ಪಿಕ್ಚರ್ಸ್ ನೀಡಿದ ಮಾಹಿತಿಯ ಪ್ರಕಾರ, ಸಿನಿಮಾ ಕೇವಲ ಮೂರು ದಿನಗಳಲ್ಲಿ ವಿಶ್ವದಾದ್ಯಂತ 100 ಕೋಟಿಗೂ ಹೆಚ್ಚು ಗಳಿಕೆ ಮಾಡಿ ಯಶಸ್ವಿ ಆರಂಭ ಕಂಡಿದೆ. ಮೊದಲ ದಿನದಿಂದಲೇ ಉತ್ತಮ ಓಪನಿಂಗ್ ಪಡೆದ ಈ ಚಿತ್ರ, ವಾರಾಂತ್ಯದಲ್ಲಿ ಮತ್ತಷ್ಟು ವೇಗ ಪಡೆದುಕೊಂಡಿದೆ. ಭಾನುವಾರದ ದಿನ ವಿಶೇಷವಾಗಿ ಕಲೆಕ್ಷನ್ ಏರಿಕೆಯಾಗಿದ್ದು, ದೇಶೀಯ ಮಾರುಕಟ್ಟೆಯ ಜೊತೆಗೆ ವಿದೇಶಗಳಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ.

ಇದನ್ನೂ ಓದಿ:

ಮೊದಲ ದಿನ 21.60 ಕೋಟಿ ರೂಪಾಯಿ, ಎರಡನೇ ದಿನ 25.65 ಕೋಟಿ ರೂಪಾಯಿ ಹಾಗೂ ಮೂರನೇ ದಿನವಾದ ಭಾನುವಾರ 30.20 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

ಭಾರತದಲ್ಲಿ ಪೇಯ್ಡ್ ಪ್ರಿವ್ಯೂಗಳೊಂದಿಗೆ ಆರಂಭವಾದ ಈ ಸಿನಿಮಾ, ಮೊದಲ ಮೂರು ದಿನಗಳಲ್ಲಿ ಕ್ರಮವಾಗಿ ಉತ್ತಮ ಆದಾಯ ಗಳಿಸಿದೆ. ಆದರೂ, ದೊಡ್ಡ ಸ್ಟಾರ್ ಸಿನಿಮಾಗೆ ಹೋಲಿಸಿದರೆ ಇದು ಮಧ್ಯಮ ಮಟ್ಟದ ಕಲೆಕ್ಷನ್ ಎನ್ನುವ ಅಭಿಪ್ರಾಯವೂ ಕೇಳಿಬರುತ್ತಿದೆ.ಇನ್ನೊಂದೆಡೆ, ವಿಮರ್ಶಕರಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾರರ್ ಮತ್ತು ಕಾಮಿಡಿ ಮಿಶ್ರಣ ಪ್ರೇಕ್ಷಕರನ್ನು ಸೆಳೆಯುತ್ತಿದ್ದರೂ, ಕಥೆಯಲ್ಲಿ ಹೊಸತನ ಕಡಿಮೆ ಎಂಬ ಟೀಕೆಗಳೂ ಕೇಳಿಬಂದಿವೆ.

ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ಟಬು, ಪರೇಶ್ ರಾವಲ್ ಸೇರಿದಂತೆ ಹಲವು ಪ್ರಮುಖ ನಟರು ಅಭಿನಯಿಸಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಮೂಡಿಸಿದೆ.

Must Read