June 15, 2026
Monday, June 15, 2026
spot_img

10 ಕೋಟಿ ವಂಚನೆ ಆರೋಪ: ಕೊನೆಗೂ ಮೌನ ಮುರಿದ ಗಾಯಕಿ ಮಂಗ್ಲಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತೆಲುಗು ಗಾಯಕಿ ಮಂಗ್ಲಿ ವಿರುದ್ಧ ಹೂಡಿಕೆ ಹಗರಣ ಹಾಗೂ ಬೆದರಿಕೆ ಆರೋಪಗಳು ಕೇಳಿಬಂದಿದ್ದು, ಈ ಸಂಬಂಧ ಹೈದರಾಬಾದ್‌ನ ಪುಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ಹೀಗಾಗಿ ಗಾಯಕಿ ತಮ್ಮ ಮೇಲಿನ ಆರೋಪಗಳ ಕುರಿತು ಮೌನ ಮುರಿಯುತ್ತಾ, ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕಿದ್ದಾರೆ.

ಈ ವಂಚನೆಗೂ ನನಗೂ ಯಾವುದೇ ಸಂಬಂಧವಿಲ್ಲ. ಇದೆಲ್ಲವೂ ನನ್ನ ವಿರುದ್ಧ ಕೆಲ ದುಷ್ಟ ವ್ಯಕ್ತಿಗಳು ನಡೆಸಿದ ಸಂಚು ಎಂದು ಹೇಳಿಕೊಂಡಿದ್ದಾರೆ.

ಮೈಕ್ರೋ ಫೈನಾನ್ಸ್​​ ಮತ್ತು ಕೆಲ ಹೂಡಿಕೆ ಸಂಸ್ಥೆಗಳಿಂದ ಹಲವು ವ್ಯಕ್ತಿಗಳಿಗೆ ಅನ್ಯಾಯವಾಗಿದೆ. ಈ ಸಂಬಂಧ ಎಲ್ಲರಿಗೂ ನ್ಯಾಯ ಸಿಗಲೆಂದು ಬಯಸುವೇನು. ಆದರೆ ವಂಚನೆ ವಿಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇದೆಲ್ಲವೂ ಕೆಲವು ದುಷ್ಟ ವ್ಯಕ್ತಿಗಳು ನನ್ನ ವಿರುದ್ಧ ರೂಪಿಸಿದ ಸಂಚು ಎಂದು ಹೇಳಿಕೊಂಡಿದ್ದಾರೆ.

ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಒಂದಲ್ಲ ಒಂದು ದಿನ ಎಲ್ಲಾ ಸತ್ಯಗಳು ಹೊರಬರಲಿದೆ. ನಾನು ನ್ಯಾಯಾಂಗವನ್ನು ನಂಬುತ್ತೇನೆ. ಹೋರಾಟ ನಡೆಸಿ ಸತ್ಯಾಂಶ ಏನೆಂದು ಹೊರ ತರುತ್ತೇನೆ ಎಂದು ತಿಳಿಸಿದ್ದಾರೆ.

ಮೈಕ್ರೋಫೈನಾನ್ಸ್ ಸ್ಕೀಮ್ ವ್ಯವಹಾರ ಹೆಸರಲ್ಲಿ ಮಂಗ್ಲಿ ಮತ್ತು ಅವರ ತಂಡವು 10 ಕೋಟಿ ರೂಪಾಯಿ ವಂಚನೆ ಮಾಡಿದೆ ಎಂದು ವಕೀಲರಾದ ಸುಬ್ಬರಾವ್ ಎಂಬುವವರು ಆರೋಪಿಸಿದ್ದಾರೆ. ಹೂಡಿಕೆಯ ಹೆಸರಿನಲ್ಲಿ ಹಣ ಪಡೆದು ಹಿಂದಿರುಗಿಸದೆ ಮೋಸ ಮಾಡಿದ್ದಾರೆ ಎಂದು ದೂರು ನೀಡಿದ್ದು, ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !