April 23, 2026
Thursday, April 23, 2026
spot_img

ಹೊಸ ಇತಿಹಾಸ ಸೃಷ್ಟಿಸಿದ ತಮಿಳುನಾಡು ಜನತೆ: 74 ವರ್ಷದ ಬಳಿಕ ನಡೆಯಿತು ದಾಖಲೆಯ ಮತದಾನ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ವಿಧಾನಸಭಾ ಚುನಾವಣೆಗೆ ಇಂದು ಬಿರುಸಿನ ಮತದಾನ ನಡೆಯಿತು. ಈ ಬಾರಿ ಕಳೆದ 74 ವರ್ಷಗಳ ಬಳಿಕ ದಾಖಲೆ ಪ್ರಮಾಣದಲ್ಲಿ ಜನರು ಮತಗಟ್ಟೆಗೆ ಆಗಮಿಸಿ ತಮ್ಮ ಅಮೂಲ್ಯ ಹಕ್ಕನ್ನು ಚಲಾಯಿಸಿದರು.

ಇಂದು ಸಂಜೆ 6 ಗಂಟೆಗೆ ಮತದಾನ ಅಂತ್ಯವಾಗಿದ್ದು, ಶೇ. 84ರಷ್ಟು ಮತದಾನ ದಾಖಲಾಗಿದೆ. ಈ ಮೂಲಕ ಹೊಸ ಚರಿತೆಯನ್ನೇ ಸೃಷ್ಟಿಸಿದೆ.

ತಮಿಳುನಾಡಿನಲ್ಲಿ 5.73 ಕೋಟಿ ಮತದಾರರು ಇಂದು 75,064 ಮತಗಟ್ಟೆಗಳಲ್ಲಿ ತೆರಳಿ ಮತದಾನ ಮಾಡಿದರು.30 ಜಿಲ್ಲೆಗಳಲ್ಲಿ ಶೇ.80ಕ್ಕಿಂತ ಹೆಚ್ಚು ವೋಟಿಂಗ್ ನಡೆದರೆ, ಕರೂರ್‌ನಲ್ಲಿ ಶೇ. 89ರಷ್ಟು ಮತಗಳು ದಾಖಲಾಗಿವೆ.

ಈ ಹಿಂದೆ 2011ರ ವಿಧಾನಸಭಾ ಚುನಾವಣೆಯಲ್ಲಿ ಶೇ. 78.29ರಷ್ಟು ಮತದಾನ ದಾಖಲಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !