ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ವಿಧಾನಸಭಾ ಚುನಾವಣೆಗೆ ಇಂದು ಬಿರುಸಿನ ಮತದಾನ ನಡೆಯಿತು. ಈ ಬಾರಿ ಕಳೆದ 74 ವರ್ಷಗಳ ಬಳಿಕ ದಾಖಲೆ ಪ್ರಮಾಣದಲ್ಲಿ ಜನರು ಮತಗಟ್ಟೆಗೆ ಆಗಮಿಸಿ ತಮ್ಮ ಅಮೂಲ್ಯ ಹಕ್ಕನ್ನು ಚಲಾಯಿಸಿದರು.
ಇಂದು ಸಂಜೆ 6 ಗಂಟೆಗೆ ಮತದಾನ ಅಂತ್ಯವಾಗಿದ್ದು, ಶೇ. 84ರಷ್ಟು ಮತದಾನ ದಾಖಲಾಗಿದೆ. ಈ ಮೂಲಕ ಹೊಸ ಚರಿತೆಯನ್ನೇ ಸೃಷ್ಟಿಸಿದೆ.
ತಮಿಳುನಾಡಿನಲ್ಲಿ 5.73 ಕೋಟಿ ಮತದಾರರು ಇಂದು 75,064 ಮತಗಟ್ಟೆಗಳಲ್ಲಿ ತೆರಳಿ ಮತದಾನ ಮಾಡಿದರು.30 ಜಿಲ್ಲೆಗಳಲ್ಲಿ ಶೇ.80ಕ್ಕಿಂತ ಹೆಚ್ಚು ವೋಟಿಂಗ್ ನಡೆದರೆ, ಕರೂರ್‌ನಲ್ಲಿ ಶೇ. 89ರಷ್ಟು ಮತಗಳು ದಾಖಲಾಗಿವೆ.
ಈ ಹಿಂದೆ 2011ರ ವಿಧಾನಸಭಾ ಚುನಾವಣೆಯಲ್ಲಿ ಶೇ. 78.29ರಷ್ಟು ಮತದಾನ ದಾಖಲಾಗಿತ್ತು.



