April 24, 2026
Friday, April 24, 2026
spot_img

ಕಂದಮ್ಮಗಳ ಎದುರೇ ತಾಯಿಯ ಹ*ತ್ಯೆ: ರುಂಡ ಹಿಡಿದು ಊರು ತುಂಬಾ ಮೆರವಣಿಗೆ ಮಾಡಿದ ಪಾಪಿ ಪತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೌಟುಂಬಿಕ ಕಲಹವೊಂದು ಭೀಕರ ಹತ್ಯೆಯಲ್ಲಿ ಕೊನೆಗೊಂಡ ಪ್ರಕರಣ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಜಗಮಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬುಂಡೇಲಿ ಗ್ರಾಮದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು, ಬಳಿಕ ಆಕೆಯ ರುಂಡವನ್ನು ಹಿಡಿದು ಗ್ರಾಮದಲ್ಲಿ ಸುತ್ತಾಡಿದ ಘಟನೆ ಬೆಳಕಿಗೆ ಬಂದಿದೆ.

ಆರೋಪಿ ಸಲೀಕ್ ರಾಮ್ ಯಾದವ್ (45) ತನ್ನ ಪತ್ನಿ ಛೇಕ್ ಬಾಯಿ (42) ಯನ್ನು ಮಚ್ಚಿನಿಂದ ಹತ್ಯೆ ಮಾಡಿದ ಬಳಿಕ ರುಂಡವನ್ನು ಚೀಲದಲ್ಲಿ ಇಟ್ಟುಕೊಂಡು ಹೊರಗೆ ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ತನ್ನ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದರಿಂದ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಘಟನೆ ಸಮಯದಲ್ಲೂ ಇದೇ ವಿಷಯದಲ್ಲಿ ವಾಗ್ವಾದ ಉಂಟಾಗಿ, ದುರ್ಘಟನೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ:

ಘಟನೆಯ ಸಮಯದಲ್ಲಿ ದಂಪತಿಗಳ ಮಕ್ಕಳು ಮನೆಯಲ್ಲೇ ಇದ್ದರು ಎಂಬುದು ಮತ್ತಷ್ಟು ಆತಂಕ ಹುಟ್ಟಿಸಿದೆ. ಗ್ರಾಮಸ್ಥರು ಮಾಹಿತಿ ನೀಡಿದ ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ರುಂಡವನ್ನು ಕೈಯಲ್ಲಿ ಹಿಡಿದು ಆತ ಶರಣಾಗಲು ಬಂದಿದ್ದ ಎನ್ನಲಾಗಿದೆ.

ಈ ಘಟನೆ ಇಡೀ ಪ್ರದೇಶದಲ್ಲಿ ಭೀತಿಯನ್ನುಂಟುಮಾಡಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !