September 27, 2026
Sunday, September 27, 2026
spot_img

ಖುಷಿ ನೀಡಿದ ಕೇಂದ್ರ ಸರ್ಕಾರದ ದಿಢೀರ್ ನಿರ್ಧಾರ: LPG ಸಿಲಿಂಡರ್‌ಗಳ ಪೂರೈಕೆ ಮಿತಿ ನಿರ್ಬಂಧ ತೆರವು

ಹೊಸದಿಗಂತ ಡಿಜಿಟಲ್ ಡೆಸ್ಕ್:


ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹಾಗೂ ಹೋರ್ಮುಜ್ ಜಲಸಂಧಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಾಣಿಜ್ಯ LPG ಸಿಲಿಂಡರ್‌ಗಳ ಪೂರೈಕೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.

ಇದನ್ನೂ ಓದಿ:


ಇದರಿಂದ ಕಳೆದ ಕೆಲವು ವಾರಗಳಿಂದ ಸಿಲಿಂಡರ್‌ ಕೊರತೆಯ ಆತಂಕದಲ್ಲಿದ್ದ ಹೋಟೆಲ್‌, ರೆಸ್ಟೋರೆಂಟ್‌, ಧಾಬಾ, ಕ್ಯಾಂಟೀನ್‌ ಹಾಗೂ ಸಣ್ಣ ಉದ್ಯಮಗಳಿಗೆ ದೊಡ್ಡ ಮಟ್ಟದ ನೆಮ್ಮದಿ ಸಿಕ್ಕಿದೆ. ಬಿಕ್ಕಟ್ಟಿನ ಸಮಯದಲ್ಲಿ ಗೃಹ ಬಳಕೆದಾರರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ವಾಣಿಜ್ಯ LPG ವಿತರಣೆಗೆ ಮಿತಿ ಹೇರಿತ್ತು. ಆದರೆ ಅಂತರರಾಷ್ಟ್ರೀಯ ಪರಿಸ್ಥಿತಿ ಸುಧಾರಿಸಿರುವುದು ಮತ್ತು ಪೂರೈಕೆ ಸರಪಳಿ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.
ಇದರಿಂದ ವಾಣಿಜ್ಯ ಬಳಕೆದಾರರಿಗೆ ಮತ್ತೆ ಅಗತ್ಯ ಪ್ರಮಾಣದಲ್ಲಿ LPG ಸಿಲಿಂಡರ್‌ಗಳು ಲಭ್ಯವಾಗಲಿದ್ದು, ಬೆಲೆ ಏರಿಕೆ ಹಾಗೂ ಪೂರೈಕೆ ಕೊರತೆಯ ಆತಂಕವೂ ಕಡಿಮೆಯಾಗುವ ನಿರೀಕ್ಷೆಯಿದೆ. ವ್ಯಾಪಾರ ವಲಯ ಈ ನಿರ್ಧಾರವನ್ನು ಸ್ವಾಗತಿಸಿದೆ.

Must Read