June 18, 2026
Thursday, June 18, 2026
spot_img

FOOD | ಮೋದಿ ಬಾಯಿ ಚಪ್ಪರಿಸಿಕೊಂಡು ತಿಂದ ಝಲ್ಮುರಿ ಮಾಡೋದು ಹೇಗೆ ಗೊತ್ತಾ?

ಕೋಲ್ಕತ್ತಾದ ಪ್ರಸಿದ್ಧ ಬೀದಿ ತಿಂಡಿ ಝಲ್ಮುರಿ ಸಿಂಪಲ್ ಆಗಿ ತಯಾರಿಸಬಹುದಾದ, ಖಾರ–ಚಟ್ ಪಟ ರುಚಿಯ ಸ್ನ್ಯಾಕ್. ಚುರುಮುರಿ, ಸಾಸಿವೆ ಎಣ್ಣೆ ಮತ್ತು ಮಸಾಲೆಗಳ ಕಂಬಿನೇಷನ್ ಇದಕ್ಕೆ ಸ್ಪೆಷಲ್ ಟೇಸ್ಟ್ ಕೊಡುತ್ತದೆ.

ಬೇಕಾಗುವ ಪದಾರ್ಥಗಳು:

4 ಕಪ್ ಚುರುಮುರಿ (ಮಂಡಕ್ಕಿ)
1 ಕಪ್ ಖಾರ ಸೇವ್
½ ಕಪ್ ಈರುಳ್ಳಿ, ಟೊಮೆಟೊ, ಬೇಯಿಸಿದ ಆಲೂಗಡ್ಡೆ
2–3 ಹಸಿರು ಮೆಣಸಿನಕಾಯಿ
2 ಚಮಚ ಹುರಿದ ಕಡಲೆಕಾಯಿ
2 ಚಮಚ ಸಾಸಿವೆ ಎಣ್ಣೆ
1 ಚಮಚ ಚಾಟ್ ಮಸಾಲಾ ಅಥವಾ ಝಲ್ ಮುರಿ ಮಸಾಲಾ
ಕಪ್ಪು ಉಪ್ಪು – ರುಚಿಗೆ ತಕ್ಕಷ್ಟು
ನಿಂಬೆ ರಸ – 1–2 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ

ತಯಾರಿಸುವ ವಿಧಾನ:

ಒಂದು ದೊಡ್ಡ ಬೌಲ್ ತೆಗೆದುಕೊಂಡು ಚುರುಮುರಿ ಮತ್ತು ಖಾರ ಸೇವ್ ಹಾಕಿ. ನಂತರ ಅದಕ್ಕೆ ಈರುಳ್ಳಿ, ಟೊಮೆಟೊ, ಆಲೂಗಡ್ಡೆ, ಹಸಿಮೆಣಸು, ಕಡಲೆಕಾಯಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಇದಕ್ಕೆ ಚಾಟ್ ಮಸಾಲಾ, ಕಪ್ಪು ಉಪ್ಪು, ನಿಂಬೆ ರಸ ಮತ್ತು ಸಾಸಿವೆ ಎಣ್ಣೆ ಹಾಕಿ ಚೆನ್ನಾಗಿ ಟಾಸ್ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತೆ ಒಮ್ಮೆ ಮಿಕ್ಸ್ ಮಾಡಿ.

ಸರ್ವ್ ಮಾಡುವ ವಿಧಾನ:

ಝಲ್ ಮುರಿಯನ್ನು ತಯಾರಿಸಿದ ತಕ್ಷಣವೇ ಸರ್ವ್ ಮಾಡಬೇಕು. ಆಗ ಮಾತ್ರ ಅದು ಗರಿಗರಿಯಾಗಿದ್ದು, ಅಸಲಿ ರುಚಿ ನೀಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !