ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮುಂಡಿ ದೈವ ಕುರಿತ ಹೇಳಿಕೆಯಿಂದ ವಿವಾದಕ್ಕೆ ಗುರಿಯಾಗಿದ್ದ ನಟ ರಣವೀರ್ ಸಿಂಗ್ ಇದೀಗ ಬೇಷರತ್ ಕ್ಷಮೆಯಾಚಿಸಿದ್ದು, ಕಾನೂನು ಹೋರಾಟಕ್ಕೂ ಅಂತ್ಯ ಕಾಣುವ ಸಾಧ್ಯತೆ ಮೂಡಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪದ ಪ್ರಕರಣ ಸಂಬಂಧ ಅವರು ನ್ಯಾಯಾಲಯದ ಮುಂದೆ ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ಹೇಳಿಕೆ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿರುವ ರಣವೀರ್, ಯಾವುದೇ ಧರ್ಮ, ಸಂಪ್ರದಾಯ ಅಥವಾ ನಂಬಿಕೆಗಳಿಗೆ ನೋವುಂಟುಮಾಡುವ ಉದ್ದೇಶ ತನ್ನದಲ್ಲ ಎಂದು ತಿಳಿಸಿದ್ದಾರೆ. ಮುಂದೆಯೂ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:
ಪ್ರಕರಣದ ವಿಚಾರಣೆ ವೇಳೆ ಕ್ಷಮೆಯಾಚನೆ ಕುರಿತು ಸಾಕಷ್ಟು ಚರ್ಚೆ ನಡೆದಿದ್ದು, ಕೊನೆಗೆ ಸಲ್ಲಿಸಿದ್ದ ಪರಿಷ್ಕೃತ ಅಫಿಡವಿಟ್‌ನ್ನು ನ್ಯಾಯಾಲಯ ಪರಿಗಣಿಸಿದೆ. ಇದರೊಂದಿಗೆ ನಟನಿಗೆ ಕಾನೂನು ಸಂಕಷ್ಟದಿಂದ ನಿರಾಳತೆ ಸಿಕ್ಕಂತಾಗಿದೆ.



