ಮಧ್ಯಾಹ್ನದ ಊಟಕ್ಕೆ ಏನಾದರೂ ಸ್ಪೆಷಲ್, ಖಾರ-ಖಾರ ಅಡುಗೆ ಮಾಡಬೇಕು ಅಂದ್ರೆ ಚಿಟ್ಟಿನಾಡ್ ಸ್ಟೈಲ್ ಮಶ್ರೂಮ್ ಬಿರಿಯಾನಿ ಬೆಸ್ಟ್. ಮಸಾಲೆಯ ರುಚಿ, ಮಶ್ರೂಮ್‌ನ ಸಾಫ್ಟ್ ಟೆಕ್ಸ್ಚರ್ ಮತ್ತು ಬಾಸುಮತಿ ಅಕ್ಕಿಯ ಸುವಾಸನೆಯ ಕಾಂಬಿನೇಷನ್ ಈ ಬಿರಿಯಾನಿಯಲ್ಲಿದೆ.
ಬೇಕಾಗುವ ಪದಾರ್ಥಗಳು
ಮಶ್ರೂಮ್ ಮ್ಯಾರಿನೇಷನ್‌ಗೆ:
ಮಶ್ರೂಮ್ – 250 ಗ್ರಾಂ
ಮೊಸರು – 3 ಚಮಚ
ಅರಿಶಿನ – ¼ ಟೀಚಮಚ
ಖಾರದ ಪುಡಿ – ½ ಟೀಚಮಚ
ಧನಿಯಾ ಪುಡಿ – 1 ಟೀಚಮಚ
ಗರಂ ಮಸಾಲ – ½ ಟೀಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಬಿರಿಯಾನಿಗೆ:
ಬಾಸುಮತಿ ಅಕ್ಕಿ – 1 ಕಪ್ (ನೆನೆಸಿಟ್ಟದ್ದು)
ಈರುಳ್ಳಿ – 2
ಟೊಮೆಟೊ – 2
ಹಸಿಮೆಣಸಿನಕಾಯಿ – 2
ಪುದೀನಾ, ಕೊತ್ತಂಬರಿ – ಸ್ವಲ್ಪ
ಎಣ್ಣೆ + ತುಪ್ಪ – 3 ಚಮಚ
ಚಕ್ಕೆ, ಲವಂಗ, ಏಲಕ್ಕಿ, ಬಿರಿಯಾನಿ ಎಲೆ – ಸ್ವಲ್ಪ
ನೀರು – 1½ ರಿಂದ 2 ಕಪ್
ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ
ಮೊದಲು ಮಶ್ರೂಮ್‌ಗೆ ಮೊಸರು, ಮಸಾಲೆ ಪುಡಿಗಳು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 20 ನಿಮಿಷ ಇಡಿ.
ನಂತರ ಕುಕ್ಕರ್‌ನಲ್ಲಿ ಎಣ್ಣೆ-ತುಪ್ಪ ಬಿಸಿ ಮಾಡಿ ಚಕ್ಕೆ, ಲವಂಗ, ಏಲಕ್ಕಿ, ಬಿರಿಯಾನಿ ಎಲೆ ಹಾಕಿ. ಇದಕ್ಕೆ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಟೊಮೆಟೊ, ಪುದೀನಾ, ಕೊತ್ತಂಬರಿ ಹಾಕಿ ಚೆನ್ನಾಗಿ ಬೇಯಿಸಿ.
ಈಗ ಮ್ಯಾರಿನೇಟ್ ಮಾಡಿದ ಮಶ್ರೂಮ್ ಹಾಕಿ 3-4 ನಿಮಿಷ ಫ್ರೈ ಮಾಡಿ. ನಂತರ ನೆನೆಸಿದ ಅಕ್ಕಿ, ನೀರು, ಉಪ್ಪು ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ. ಕುಕ್ಕರ್‌ಗೆ 2 ಸೀಟಿ ಬಂದರೆ ಸಾಕು. ಬಿಸಿ ಬಿಸಿ ಚಿಟ್ಟಿನಾಡ್ ಮಶ್ರೂಮ್ ಬಿರಿಯಾನಿ ರೆಡಿ!



