April 27, 2026
Monday, April 27, 2026
spot_img

ದಿನಭವಿಷ್ಯ: ಭಾವನೆ ಹಂಚಿಕೊಂಡು ಮನಸ್ಸು ಹಗುರ ಮಾಡ್ಕೊಳಿ, ಕೆಲಸದಲ್ಲಿ ಹೊಸ ಅವಕಾಶ

ಮೇಷ
ಸಾಧನೆಯ ದಿನ. ವ್ಯವಹಾರದಲ್ಲಿ ಸಫಲತೆ. ಕೆಲಕಾಲದಿಂದ ಕಾಡುತ್ತಿದ್ದ ಚಿಂತೆ ಪರಿಹಾರ. ನೆರೆಮನೆಯವರ ಜತೆ ವಾಗ್ವಾದ ಸಂಭವ.
ವೃಷಭ
ಹೊಸ ವ್ಯವಹಾರಕ್ಕೆ ಅಡ್ಡಿಗಳು. ನಂಬಿಗಸ್ಥರ ಜತೆ ವ್ಯವಹಾರ ನಡೆಸಿ. ಆಪ್ತರ ಜತೆಗಿನ ಸಂಬಂಧದಲ್ಲಿ ಉದ್ವಿಗ್ನತೆ. ಹೊಂದಾಣಿಕೆ ಮುಖ್ಯ. ಖರ್ಚು ಹೆಚ್ಚಳ.
ಮಿಥುನ
ನಿಮ್ಮ ಭಾವನೆ, ಮನಸ್ಥಿತಿ ಆಪ್ತರ ಜತೆ ಹಂಚಿಕೊಳ್ಳಿ. ಇದರಿಂದ ಮನಸ್ಸು ಹಗುರ. ಸುಮ್ಮನೇ ಕೊರಗುತ್ತಾ ಕೂರಬೇಡಿ.
ಕಟಕ
ಸಂಗಾತಿ ಜತೆ ಸಂಘರ್ಷ ನಡೆದೀತು. ಅವರ ದೃಷ್ಟಿಕೋನ ಕೂಡಾ ಪರಾಮರ್ಶಿಸಿ. ಸ್ನೇಹಿತರ ಜತೆ ಆತ್ಮೀಯ ಕಾಲಕ್ಷೇಪ. ಆರ್ಥಿಕ ಒತ್ತಡ.
ಸಿಂಹ
ಸಣ್ಣಪುಟ್ಟ ಜಗಳದಲ್ಲಿ ತೊಡಗಿಕೊಳ್ಳಬೇಡಿ. ಅದರಿಂದ ಮನಸ್ಸಿನ ನೆಮ್ಮದಿ ಹಾಳು. ವೃತ್ತಿ ಯಲ್ಲಿ ಹೊಸ ಅವಕಾಶ. ಸ್ನೇಹದಲ್ಲಿ ಬಿರುಕು.
ಕನ್ಯಾ
ಹೆಚ್ಚುವರಿ ಹೊಣೆಗಾರಿಕೆ ಒತ್ತಡ ಸೃಷ್ಟಿಸಲಿದೆ. ದುಡುಕಿನ ನಿರ್ಧಾರ ತಾಳದಿರಿ. ಖರೀದಿಯ ಉತ್ಸಾಹಕ್ಕೆ ಕಡಿವಾಣ ಹಾಕಿ.
ತುಲಾ
ನಿಶ್ಚಿತ ಸಮಯದಲ್ಲಿ ಕೆಲಸ ಪೂರೈಸಲು ವಿಫಲ. ಇದರಿಂದ ಒತ್ತಡ ಹೆಚ್ಚಳ. ಬೇರೆಯವರಿಂದ ಸಿಗಬೇಕಾದುದನ್ನು ಕೇಳಿ ಪಡೆಯಿರಿ.
ವೃಶ್ಚಿಕ
ಅಡ್ಡಿಗಳನ್ನು ನಿವಾರಿಸಿಕೊಂಡು ವಿಳಂಬವಿಲ್ಲದೆ ಕಾರ್ಯ ಎಸಗುವಿರಿ. ಆರ್ಥಿಕ ಸ್ಥಿರತೆ. ವೃತ್ತಿ ಒತ್ತಡ ನಿವಾರಣೆಯಾಗಲಿದೆ.
ಧನು
ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯಿರಿ. ಆರೋಗ್ಯದ ಕುರಿತು ಕಾಳಜಿ ವಹಿಸಿರಿ. ಕಲಾವಿದರಿಗೆ ಯಶ. ಸಾಧನೆಯ ತೃಪ್ತಿ.
ಮಕರ
ಮನೆಯವರ ಜತೆ ಉತ್ತಮ ಹೊಂದಾಣಿಕೆ. ಭಿನ್ನಮತ ನಿವಾರಣೆ. ವದಂತಿಗಳಿಗೆ ಹೆಚ್ಚು ಕಿವಿಗೊಡಬೇಡಿ. ನಿಮ್ಮ ಕೆಲಸ ಮಾಡುತ್ತಿರಿ.
ಕುಂಭ
ಆಸ್ತಿ ಖರೀದಿಗೆ ಉದ್ದೇಶಿಸಿದ್ದರೆ ಇಚ್ಛಿಸಿದ ಬೆಲೆಗೆ ದೊರಕದು. ಕೌಟುಂಬಿಕ ಪರಿಸರ ಶಾಂತ. ಮಕ್ಕಳ ಸಾಧನೆಯಿಂದ ತೃಪ್ತಿ.
ಮೀನ
ಕಾಲಮಿತಿಯಲ್ಲಿ ನಿಮ್ಮ ಗುರಿ ಸಾಧಿಸುವಿರಿ. ಯಾವುದೇ ವಿಘ್ನ ಬಾಧಿಸದು. ಕೌಟುಂಬಿಕ ಸಂತೃಪ್ತಿ. ವಿದ್ಯಾರ್ಥಿಗಳ ಆಶಯ ಪೂರೈಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !