April 27, 2026
Monday, April 27, 2026
spot_img

‘ಪಪ್ಪು’ ಅನ್ನೋದು ಸುಮ್ನೆ ಅಲ್ಲ…! ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯವಾಡಿದ TMC ನಾಯಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ಚುನಾವಣಾ ರಂಗ ದಿನದಿಂದ ದಿನಕ್ಕೆ ಮತ್ತಷ್ಟು ಬಿಸಿಯಾಗುತ್ತಿದ್ದು, ರಾಜಕೀಯ ಪಕ್ಷಗಳ ನಡುವಿನ ಆರೋಪ-ಪ್ರತ್ಯಾರೋಪಗಳು ಹೊಸ ತಿರುವು ಪಡೆಯುತ್ತಿವೆ. ಈ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಟಿಎಂಸಿ ಹಿರಿಯ ನಾಯಕ ಕುನಾಲ್ ಘೋಷ್ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.

ಕೋಲ್ಕತ್ತಾದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ರಾಜಕೀಯ ನಡೆಗಳು ಬಿಜೆಪಿಗೆ ಅನುಕೂಲಕರವಾಗಿವೆ ಎಂದು ಆರೋಪಿಸಿದರು. ಟಿಎಂಸಿ ಪ್ರಭಾವವಿರುವ ಕ್ಷೇತ್ರಗಳಲ್ಲಿ ಅವರ ಪ್ರಚಾರ ಮತ ವಿಭಜನೆಗೆ ಕಾರಣವಾಗಬಹುದು ಎಂದು ಘೋಷ್ ಹೇಳಿದರು.

ಇದನ್ನೂ ಓದಿ:

ಇದೇ ವೇಳೆ ಬಿಜೆಪಿ ನಾಯಕರು ರಾಹುಲ್ ಗಾಂಧಿಯನ್ನು ‘ಪಪ್ಪು’ ಎಂದು ಕರೆಯುವುದನ್ನು ಕುನಾಲ್ ಘೋಷ್ ಸಮರ್ಥಿಸಿಕೊಂಡರು. ರಾಹುಲ್ ಅವರ ರಾಜಕೀಯ ನಿರ್ಧಾರಗಳು ಮತ್ತು ನಿರಂತರ ವೈಫಲ್ಯಗಳನ್ನು ನೋಡಿದರೆ ಆ ಟೀಕೆ ಅಚ್ಚರಿಯದ್ದಲ್ಲ ಎಂದು ವ್ಯಂಗ್ಯವಾಡಿದರು.

ರಾಹುಲ್ ಗಾಂಧಿ ಇತ್ತೀಚೆಗೆ ಟಿಎಂಸಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಹಿನ್ನೆಲೆ, ಇದೀಗ ಟಿಎಂಸಿ ಕಡೆಯಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಾತಿನ ಸಮರ ಬಂಗಾಳ ಚುನಾವಣಾ ಕಣಕ್ಕೆ ಮತ್ತಷ್ಟು ಕಾವು ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !