April 27, 2026
Monday, April 27, 2026
spot_img

Healthy Routine | ದಿನ ಶುರು ಮಾಡೋ ಮೊದಲ 30 ನಿಮಿಷ ನಿಮ್ಮ ಆರೋಗ್ಯ ಬದಲಿಸಬಹುದು

ಬೆಳಗ್ಗೆ ಎದ್ದ ನಂತರ ನಾವು ಮಾಡುವ ಮೊದಲ 30 ನಿಮಿಷಗಳು ದಿನದ ಪೂರ್ತಿ ಎನರ್ಜಿ, ಮೂಡ್ ಮತ್ತು ಫಿಟ್ನೆಸ್ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಈ ಸಮಯವನ್ನು ಸರಿಯಾಗಿ ಬಳಸಿದ್ರೆ ಜಿಮ್ ಇಲ್ಲದೇ ಕೂಡ ಆರೋಗ್ಯದಲ್ಲಿ ಸ್ಪಷ್ಟ ಬದಲಾವಣೆ ಕಾಣಬಹುದು.

  • ರಾತ್ರಿ ನಿದ್ರೆಯ ನಂತರ ದೇಹ ಡಿಹೈಡ್ರೇಟ್ ಆಗಿರುತ್ತದೆ. ಒಂದು ಅಥವಾ ಎರಡು ಗ್ಲಾಸ್ ನೀರು ಕುಡಿಯುವುದರಿಂದ ಮೆಟಾಬಾಲಿಸಂ ಆಕ್ಟಿವ್ ಆಗಿ ದೇಹ ತಾಜಾ ಆಗುತ್ತದೆ.
  • ಎದ್ದ ಕೂಡಲೇ ಫೋನ್ ನೋಡೋದು ಮನಸ್ಸನ್ನು ಗೊಂದಲಗೊಳಿಸುತ್ತದೆ. ಮೊದಲ 10 ನಿಮಿಷ ಶಾಂತವಾಗಿ ಇರುವುದು ಅಥವಾ ಡೀಪ್ ಬ್ರೀದಿಂಗ್ ಮಾಡುವುದು ಉತ್ತಮ.
  • ಸರಳ ಸ್ಟ್ರೆಚಿಂಗ್, ವಾಕ್ ಅಥವಾ ಯೋಗ ಮಾಡಿದ್ರೆ ದೇಹದಲ್ಲಿ ರಕ್ತ ಸಂಚಾರ ಹೆಚ್ಚಾಗಿ ಚುರುಕಾಗುತ್ತದೆ. ಇದು ದಿನಪೂರ್ತಿ ದಣಿವು ಕಡಿಮೆ ಮಾಡುತ್ತದೆ.
  • ಬೆಳಗಿನ ಸೂರ್ಯಕಿರಣಗಳು ವಿಟಮಿನ್ D ನೀಡುತ್ತವೆ. ಇದು ಎನರ್ಜಿ ಮತ್ತು ಇಮ್ಯುನಿಟಿಗೆ ಸಹಾಯ ಮಾಡುತ್ತದೆ.
  • ಇಂದು ಏನು ಮಾಡಬೇಕು ಅನ್ನೋ ಸಣ್ಣ ಪ್ಲಾನ್ ಮಾಡಿದ್ರೆ ಮನಸ್ಸು ಫೋಕಸ್ ಆಗಿರುತ್ತದೆ ಮತ್ತು ಸ್ಟ್ರೆಸ್ ಕಡಿಮೆಯಾಗುತ್ತದೆ.

ಈ 30 ನಿಮಿಷಗಳನ್ನು ಸರಿಯಾಗಿ ಬಳಸಿದ್ರೆ ದಿನದ ಅರ್ಧ ಫಿಟ್ನೆಸ್ ಅಲ್ಲೇ ಸೆಟ್ ಆಗುತ್ತದೆ ನೋಡಿ. ದೊಡ್ಡ ಬದಲಾವಣೆಗಳು ಸಣ್ಣ ರೂಟೀನ್‌ನಿಂದಲೇ ಶುರುವಾಗುತ್ತವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !