ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಂತಲ್ಲಿ ನಿಲ್ಲಲೂ ಆಗದೇ, ಕೂತಲ್ಲಿ ಕೂರಲೂ ಆಗದೇ, ಹೊರಗಡೆ ಹೋಗಲಾರದೆ, ಒಳಗಡೆ ಕೂರಲಾರದಂತೆ ಮಾಡಿರೋದು ಈ ವರ್ಷದ ಬೇಸಿಗೆ!
ಅಕ್ಷರಶಃ ಜನರ ನಿದ್ದೆಗೆಡಿಸಿರುವ ಬೇಸಿಗೆ ಜನರಿಗೆ ಸಾಕಪ್ಪಾ ಎನಿಸುವಷ್ಟು ಸುಸ್ತು ಮಾಡಿದೆ. ಅದರಲ್ಲಿಯೂ ವೆದರ್ನಿಂದಲೇ ಫೇಮಸ್ ಆಗಿದ್ದ ಬೆಂಗಳೂರಿಗೆ ಬಿಸಿಲಿನ ಕೆಟ್ಟ ದೃಷ್ಟಿ ಬಿದ್ದಂತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ38.2°C ಗರಿಷ್ಠ ತಾಪಮಾನ ದಾಖಲಾಗಿದೆ. ನಗರ ಪ್ರದೇಶದಲ್ಲಿಯೂ 36 ಡಿಗ್ರಿಗಿಂತ ಹೆಚ್ಚು ತಾಪಮಾನ ದಾಖಲಾಗಿದೆ.
ಫ್ಲೈಟ್ ಲ್ಯಾಂಡ್ ಆದ ತಕ್ಷಣವೇ ಬೆಂಗಳೂರಿನ ಬಿಸಿಲು ತಗುಲುತ್ತಿದ್ದು, ಜನ ನಲುಗಿದ್ದಾರೆ. ಆದರೆ ಐಎಂಡಿ ಮಾಹಿತಿ ಪ್ರಕಾರ ಇನ್ನೇನು ಎರಡು ದಿನಗಳಲ್ಲಿ ಇನ್ನಷ್ಟು ಬಿಸಿಲು ಜಾಸ್ತಿಯಾಗಲಿದೆ. ಅದರ ಮಧ್ಯೆಯೂ ಬೆಂಗಳೂರಿನಲ್ಲಿ ಬುಧವಾರ ಅಥವಾ ಗುರುವಾರದಿಂದ ಎರಡು ದಿನ ಮಳೆ ಬೀಳಬಹುದು ಎನ್ನಲಾಗಿದೆ.
ಇದು ಬರೀ ಎರಡು ದಿನದ ಕಥೆಯಾಗಿದ್ದು, ಮತ್ತೆ ಬೇಸಿಗೆ ಆರಂಭವಾಗಲಿದೆ.



