August 29, 2026
Saturday, August 29, 2026
spot_img

WEATHER | ಕೆಲವು ಜಿಲ್ಲೆಗಳಲ್ಲಿ ಹೀಟ್‌ವೇವ್‌ ಬಿಸಿ, ಹಲವು ಜಿಲ್ಲೆಗಳಿಗೆ ಆಲಿಕಲ್ಲು ಮಳೆಯ ಹೊಡೆತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿನ ವಾತಾವರಣ ಅತಂತ್ರವಾಗಿದೆ. ಇಡೀ ರಾಜ್ಯ ಬಿಸಿಲಿನಿಂದ ಸುಡುತ್ತಿದೆ, ಆದರೆ ಕೆಲವು ಜಿಲ್ಲೆಗಳಿಗೆ ಮಾತ್ರ ಇಂದು ಆಲಿಕಲ್ಲು ಗುಡುಗು ಸಹಿತ ಮಳೆ ಅಬ್ಬರಿಸಲಿದೆ.

ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕಲಬುರಗಿ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಗುಡುಗು ಹಾಗೂ ಆಲಿಕಲ್ಲು ಸಹಿತ ಮಳೆಯಾಗಲಿದ್ದು, ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಇನ್ನುಳಿದ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣ ಇರಲಿದೆ. ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನದಲ್ಲಿ ಗುಡುಗು ಸಹಿತ ಮಳೆ ಬೀಳಲಿದೆ.

ರಾಜಧಾನಿ ಬೆಂಗಳೂರಿಗರಿಗೆ ಯಾವುದೇ ಬದಲಾವಣೆ ಇಲ್ಲ. ಅದೇ ಯಥಾಸ್ಥಿತಿ ಬಿಸಿಲು ಇರಲಿದೆ. ಕೆಲವು ಏರಿಯಾಗಳಲ್ಲಿ ಬಿಸಿಲು ನಿಧಾನಕ್ಕೆ ಮೇಲೇರಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !