April 29, 2026
Wednesday, April 29, 2026
spot_img

CINE | ಮತ್ತೆ ಬರ್ತಿದ್ದಾರೆ ‘3 ಈಡಿಯಟ್ಸ್’: ಸೀಕ್ವೆಲ್‌ಗೆ ಆಮೀರ್ ಖಾನ್ ಗ್ರೀನ್ ಸಿಗ್ನಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಜನಪ್ರಿಯ ಚಿತ್ರಗಳಲ್ಲಿ ಒಂದಾದ 3 ಈಡಿಯಟ್ಸ್ ಮತ್ತೆ ಬೆಳ್ಳಿ ಪರದೆ ಮೇಲೆ ಕಂಗೊಳಿಸಲು ಸಜ್ಜಾಗುತ್ತಿದೆ. ಚಿತ್ರದ ಸೀಕ್ವೆಲ್ ಕುರಿತು ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಊಹಾಪೋಹಗಳಿಗೆ ಇದೀಗ ನಟ ಆಮೀರ್ ಖಾನ್ ಸ್ಪಷ್ಟನೆ ನೀಡಿದ್ದು, ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದ್ದಾರೆ.

ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಆಮೀರ್ ಖಾನ್, ‘3 ಈಡಿಯಟ್ಸ್’ ಎರಡನೇ ಭಾಗದ ಕೆಲಸ ಆರಂಭವಾಗಿದೆ ಎಂದು ತಿಳಿಸಿದ್ದಾರೆ. ಮೊದಲ ಭಾಗದಲ್ಲಿ ಪ್ರೇಕ್ಷಕರ ಮನಗೆದ್ದ ಅದೇ ಪ್ರಮುಖ ಪಾತ್ರಗಳು ಸೀಕ್ವೆಲ್‌ನಲ್ಲೂ ಕಾಣಿಸಿಕೊಳ್ಳಲಿದ್ದು, ಕಥೆಯೂ ಅಷ್ಟೇ ಮನರಂಜನಾತ್ಮಕವಾಗಿರಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಈ ಚಿತ್ರವನ್ನು ಮೊದಲ ಭಾಗದಂತೆ ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಲಿದ್ದಾರೆ. ಕಥೆ ಈಗಾಗಲೇ ಸಿದ್ಧವಾಗುತ್ತಿದ್ದು, ಚಿತ್ರಕಥೆಗೆ ಅಂತಿಮ ರೂಪ ನೀಡುವ ಕೆಲಸ ನಡೆಯುತ್ತಿದೆ ಎನ್ನಲಾಗಿದೆ.

2009ರಲ್ಲಿ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡ ‘3 ಈಡಿಯಟ್ಸ್’ ಹಾಸ್ಯ, ಸ್ನೇಹ ಮತ್ತು ಸಾಮಾಜಿಕ ಸಂದೇಶದ ಮೂಲಕ ಪ್ರೇಕ್ಷಕರ ಮನಗೆದ್ದಿತ್ತು. ಇದೀಗ ಅದರ ಮುಂದುವರಿದ ಕಥೆ ಮತ್ತೆ ಅದೇ ಮಾಯೆ ಮಾಡುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !