April 29, 2026
Wednesday, April 29, 2026
spot_img

Gardening | ಬೇಸಿಗೆ ಕಾಲದಲ್ಲಿ ಗಿಡಗಳಿಗೆ ನೀರು ಹಾಕೋದು ಯಾವಾಗ? ಬೆಳಿಗ್ಗೆನಾ? ಸಂಜೆನಾ?

ಬೇಸಿಗೆ ಬಂದಾಕ್ಷಣ ಗಿಡಗಳ ಆರೈಕೆ ದೊಡ್ಡ ಸವಾಲಾಗಿಬಿಡುತ್ತದೆ. ಹೆಚ್ಚು ಬಿಸಿಲು, ಒಣಗಾಳಿ ಮತ್ತು ಮಣ್ಣಿನ ತೇವಾಂಶ ಬೇಗ ಕಡಿಮೆಯಾಗುವುದರಿಂದ ಗಿಡಗಳು ಬೇಗ ಒಣಗುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಎಷ್ಟು ನೀರು ಹಾಕುತ್ತೇವೆ ಅನ್ನೋದಕ್ಕಿಂತ ಯಾವಾಗ ನೀರು ಹಾಕುತ್ತೇವೆ ಅನ್ನೋದು ಹೆಚ್ಚು ಮುಖ್ಯ. ತಪ್ಪು ಸಮಯದಲ್ಲಿ ನೀರು ಹಾಕಿದರೆ ಗಿಡಗಳ ಬೆಳವಣಿಗೆಯೇ ಕುಂಠಿತವಾಗಬಹುದು.

ಬೆಳಗಿನ 6ರಿಂದ 8 ಗಂಟೆಯೊಳಗೆ ಗಿಡಗಳಿಗೆ ನೀರು ಹಾಕುವುದು ಬೆಸ್ಟ್. ಈ ಸಮಯದಲ್ಲಿ ಮಣ್ಣು ನಿಧಾನವಾಗಿ ನೀರನ್ನು ಹೀರಿಕೊಳ್ಳುತ್ತದೆ. ಬೇರುಗಳಿಗೆ ಬೇಕಾದಷ್ಟು ತೇವಾಂಶ ಸಿಗುತ್ತದೆ. ಜೊತೆಗೆ ದಿನಪೂರ್ತಿ ಬಿಸಿಲಿನ ಹೊಡೆತವನ್ನು ಎದುರಿಸಲು ಗಿಡಗಳು ಸಿದ್ಧವಾಗುತ್ತವೆ. ಎಲೆಗಳ ಮೇಲೆ ಬಿದ್ದ ನೀರೂ ಬೇಗ ಒಣಗುವುದರಿಂದ ಫಂಗಸ್ ಸಮಸ್ಯೆ ಕಡಿಮೆ.

ಸಂಜೆ ನೀರು ಹಾಕಬಹುದು… ಆದರೆ ಎಚ್ಚರಿಕೆ ಬೇಕು
ಸಂಜೆ 5.30ರಿಂದ 6.30ರೊಳಗೆ ನೀರು ಹಾಕಬಹುದು. ಆದರೆ ತುಂಬಾ ತಡವಾಗಿ ನೀರು ಹಾಕಿದರೆ ಮಣ್ಣಿನಲ್ಲಿ ತೇವಾಂಶ ಹೆಚ್ಚು ಹೊತ್ತು ಉಳಿದು ಬೇರು ಕೊಳೆಯುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಕುಂಡಗಳಲ್ಲಿರುವ ಗಿಡಗಳಿಗೆ ಇದು ಸಮಸ್ಯೆಯಾಗಬಹುದು.

ಇದನ್ನೂ ಓದಿ:

ಬಿಸಿಲು ತೀವ್ರವಾಗಿರುವ ಸಮಯದಲ್ಲಿ ನೀರು ಹಾಕಿದರೆ ಅದು ಬೇಗ ಆವಿಯಾಗುತ್ತದೆ. ಗಿಡಕ್ಕೆ ಲಾಭ ಕಡಿಮೆ. ಕೆಲವೊಮ್ಮೆ ಬಿಸಿಯಾದ ಮಣ್ಣಿಗೆ ತಣ್ಣೀರು ಬಿದ್ದಾಗ ಬೇರುಗಳಿಗೆ ಶಾಕ್ ಆಗಬಹುದು.

ಪ್ರತಿದಿನ ಸ್ವಲ್ಪಸ್ವಲ್ಪ ನೀರು ಹಾಕೋದಕ್ಕಿಂತ, ಮಣ್ಣಿನ ತೇವಾಂಶ ನೋಡಿ ಆಳವಾಗಿ ನೀರು ಹಾಕಿ. ಇದರಿಂದ ಬೇರುಗಳು ಗಟ್ಟಿಯಾಗುತ್ತವೆ, ಗಿಡ ಆರೋಗ್ಯವಾಗಿರುತ್ತದೆ.

ಗಮನದಲ್ಲಿಡಿ:
ಬೇಸಿಗೆಯಲ್ಲಿ ಗಿಡಗಳಿಗೆ ನೀರು ಹಾಕೋ ಚಿನ್ನದ ಸಮಯ ಬೆಳಗ್ಗೆ! ಗಿಡವೂ ಹಸಿರಾಗಿರುತ್ತೆ, ನಿಮ್ಮ ತೋಟವೂ ಚೆನ್ನಾಗಿ ಕಂಗೊಳಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !