June 14, 2026
Sunday, June 14, 2026
spot_img

CINE | ‘ಟಾಕ್ಸಿಕ್’ ಗಾಗಿ ಕಾಯ್ತಿದ್ದೀರಾ? ಹಾಗಿದ್ರೆ ಮತ್ತೆ ನಿರಾಸೆ ನಿಮ್ಗೆ: ‘ಫೇರಿ ಟೇಲ್’ ರಿಲೀಸ್ ಮುಂದೂಡಿದ ಚಿತ್ರತಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ದಿ ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕ ಮತ್ತೆ ಮುಂದೂಡಲಾಗಿದೆ. ಈ ಹಿಂದೆ ಜೂನ್ 4ಕ್ಕೆ ಚಿತ್ರ ಬಿಡುಗಡೆ ಮಾಡಲು ಯೋಜನೆ ಇಡಲಾಗಿದ್ದರೂ, ಇದೀಗ ಚಿತ್ರತಂಡದಿಂದ ಹೊಸ ನಿರ್ಧಾರ ಪ್ರಕಟವಾಗಿದೆ.

ಮೂಲತಃ ಮಾರ್ಚ್ 19ರಂದು ರಿಲೀಸ್ ಆಗಬೇಕಿದ್ದ ಈ ಸಿನಿಮಾ ನಂತರ ಜೂನ್ 4ಕ್ಕೆ ಮುಂದೂಡಲಾಗಿತ್ತು. ಇದೀಗ ಮತ್ತೆ ಅನಿರ್ದಿಷ್ಟ ಕಾರಣಗಳಿಂದ ಬಿಡುಗಡೆ ಮುಂದೂಡಿಕೆಯಾಗಿದೆ ಎಂದು ತಿಳಿದುಬಂದಿದ್ದು, ಹೊಸ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಲಾಗಿಲ್ಲ.

ಚಿತ್ರದ ಕುರಿತು ಈಗಾಗಲೇ ಟೀಸರ್ ಮತ್ತು ಪಾತ್ರಗಳ ಲುಕ್ ರಿವೀಲ್ ಆಗಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿತ್ತು. ಆದರೆ ಮತ್ತೊಮ್ಮೆ ವಿಳಂಬವಾಗಿರುವ ಸುದ್ದಿ ಕೇಳಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರಾಶೆ ವ್ಯಕ್ತಪಡಿಸಿದ್ದಾರೆ. ಕೆಲವರು ಚಿತ್ರಕ್ಕಾಗಿ ಕಾಯಲು ಸಿದ್ಧವೆಂದು ಹೇಳಿದರೆ, ಇನ್ನೂ ಕೆಲವರು ಅಪ್ಡೇಟ್ ಬೇಗ ಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:

ಇತ್ತೀಚೆಗೆ ನಿರ್ದೇಶಕಿ ಗೀತು ಮೋಹನ್‌ ದಾಸ್ ಅವರ ನಿರ್ದೇಶನ ಶೈಲಿಯನ್ನು ಯಶ್ ಮೆಚ್ಚಿಕೊಂಡಿದ್ದರು. ಗ್ಯಾಂಗ್‌ಸ್ಟರ್ ಕಥೆಯಲ್ಲಿ ವಿಭಿನ್ನ ನಿರೂಪಣೆ ಮತ್ತು ದೃಶ್ಯಶೈಲಿ ಈ ಸಿನಿಮಾದ ವಿಶೇಷತೆ ಎಂದು ಹೇಳಲಾಗುತ್ತಿದೆ.

ಚಿತ್ರತಂಡ ಶೀಘ್ರದಲ್ಲೇ ಹೊಸ ಬಿಡುಗಡೆ ದಿನಾಂಕವನ್ನು ಪ್ರಕಟಿಸುವ ನಿರೀಕ್ಷೆ ಇದೆ. ಸದ್ಯಕ್ಕೆ ಅಭಿಮಾನಿಗಳು ಮತ್ತೆ ಕಾದುನೋಡುವ ಪರಿಸ್ಥಿತಿಯಲ್ಲಿ ಇದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !