ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರೀಮ್ ನಗರದಲ್ಲಿ ಪ್ರೇಮ ವಿವಾಹವೊಂದು ಈಗ ಭೀಕರ ಕೌಟುಂಬಿಕ ಕಲಹವಾಗಿ ಮಾರ್ಪಟಿದ್ದು, ಗಂಡ ಹೆಂಡತಿಯರ ಜಗಳ ಮಕ್ಕಳನ್ನು ಅನಾಥವಾಗಿದೆ.
ರವಿ ಕುಮಾರ್ ಮತ್ತು ಲಲಿತಾ ದಂಪತಿ ತಮ್ಮ ಸಂಬಂಧದ ಸಮಸ್ಯೆ ಪರಿಹರಿಸಲು ಲೋವರ್ ಮನೇರ್ ಡ್ಯಾಮ್ ಪೊಲೀಸ್ ಠಾಣೆಗೆ ಬಂದಿದ್ದರು. ಆದರೆ ಕೌನ್ಸೆಲಿಂಗ್ ವೇಳೆ ಚರ್ಚೆ ತೀವ್ರಗೊಂಡಾಗ ಲಲಿತಾ ತಮ್ಮ ಮಂಗಳಸೂತ್ರ ಹಾಗೂ ಕಾಲುಂಗುರವನ್ನು ತೆಗೆದು “ಈ ಸಂಸಾರವೂ ಬೇಡ, ಮಕ್ಕಳೂ ಬೇಡ” ಎಂದು ಹೇಳಿ ಠಾಣೆಯಿಂದ ಹೊರನಡೆದರು. ಕ್ಷಣದಲ್ಲೇ ಪತಿ ರವಿ ಕುಮಾರ್ ಕೂಡ ಇಬ್ಬರು ಹೆಣ್ಣುಮಕ್ಕಳನ್ನು ಅಲ್ಲೇ ಬಿಟ್ಟು ಹೊರಟುಹೋದರು.
ಇದನ್ನೂ ಓದಿ:
ಪೋಷಕರು ಹೊರಹೋಗುತ್ತಿದ್ದಂತೆ ಮಕ್ಕಳು ಭಯದಿಂದ ಕಣ್ಣೀರಿಟ್ಟಿದ್ದು, ಠಾಣಾ ಸಿಬ್ಬಂದಿ ಅವರಿಗೆ ಊಟ ನೀಡಿ ಸಮಾಧಾನಪಡಿಸಿದರು. ಅನ್ವರ್ ಸೇರಿದಂತೆ ಪೊಲೀಸರ ತಂಡ ಪೋಷಕರನ್ನು ಸಂಪರ್ಕಿಸಲು ಯತ್ನಿಸಿದರೂ ಪ್ರತಿಕ್ರಿಯೆ ಸಿಗಲಿಲ್ಲ.
ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಅಜ್ಜಿಯನ್ನು ಸಂಪರ್ಕಿಸಿ ಠಾಣೆಗೆ ಕರೆಸಲಾಗಿದ್ದು, ಅವರು ಮೊಮ್ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋದರು. ಸದ್ಯ ಯಾವುದೇ ಪ್ರಕರಣ ದಾಖಲಾಗಿಲ್ಲ.



