August 18, 2026
Tuesday, August 18, 2026
spot_img

FOOD | ಬೇಸಿಗೆಯ ಧಗೆ ತಂಪು ಮಾಡೋಕೆ ಕೊತ್ತಂಬರಿ ಸೊಪ್ಪಿನ ತಂಬುಳಿ ಟ್ರೈ ಮಾಡಿ

ಬೇಸಿಗೆಯ ಉರಿ ಬಿಸಿಲಿನಲ್ಲಿ ದೇಹವನ್ನು ತಂಪಾಗಿಡಲು ಕೊತ್ತಂಬರಿ ಸೊಪ್ಪಿನ ತಂಬುಳಿ ಒಂದು ಅತ್ಯುತ್ತಮ ಕರ್ನಾಟಕ ಶೈಲಿಯ ಆರೋಗ್ಯಕರ ರೆಸಿಪಿ. ಇದು ಜೀರ್ಣಕ್ರಿಯೆಗೆ ಸಹಾಯಕವಾಗಿದ್ದು, ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಮಾಡೋದು ಹೇಗೆ: ಮೊದಲು ಒಂದು ಚಿಕ್ಕ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕೊತ್ತಂಬರಿ ಸೊಪ್ಪು, ಜೀರಿಗೆ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಹಸಿ ವಾಸನೆ ಹೋಗುವವರೆಗೆ ಸ್ವಲ್ಪ ಹುರಿಯಿರಿ. ನಂತರ ಈ ಮಿಶ್ರಣವನ್ನು ತೆಂಗಿನತುರಿಯೊಂದಿಗೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

ಈ ರುಬ್ಬಿದ ಮಿಶ್ರಣಕ್ಕೆ ತಣ್ಣನೆಯ ಮೊಸರು ಅಥವಾ ಮಜ್ಜಿಗೆ ಸೇರಿಸಿ ಚೆನ್ನಾಗಿ ಕಲಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

ಇದನ್ನೂ ಓದಿ:

ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ ಮತ್ತು ಇಂಗು ಹಾಕಿ ಒಗ್ಗರಣೆ ತಯಾರಿಸಿ ಅದನ್ನು ತಂಬುಳಿಗೆ ಸೇರಿಸಿ.

ಚೆನ್ನಾಗಿ ಮಿಶ್ರಣ ಮಾಡಿದ ಬಳಿಕ ತಕ್ಷಣವೇ ಸೇವಿಸಬಹುದು. ಈ ತಂಬುಳಿ ದೇಹವನ್ನು ತಂಪಾಗಿಡುವುದಲ್ಲದೆ, ಹೊಟ್ಟೆಯ ಆರೋಗ್ಯಕ್ಕೂ ಉತ್ತಮ. ಬೇಸಿಗೆಯಲ್ಲಿ ದಿನಕ್ಕೆ ಒಮ್ಮೆ ಕುಡಿದರೆ ದಣಿವು ಕಡಿಮೆಯಾಗುತ್ತದೆ ಮತ್ತು ಹೈಡ್ರೇಷನ್ ಕಾಪಾಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !