April 29, 2026
Wednesday, April 29, 2026
spot_img

ವೈಟ್ ಹೌಸ್ ನಿಗೂಢ ನಡೆ: ಅಮೆರಿಕದ ಪಾಸ್‌ಪೋರ್ಟ್‌ನಲ್ಲಿ ಟ್ರಂಪ್ ಫೋಟೋ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ 250ನೇ ವಾರ್ಷಿಕೋತ್ಸವವನ್ನು ಆಚರಿಸಲು ಸಿದ್ಧತೆ ನಡೆಸುತ್ತಿದ್ದು, ಇದರ ನಡುವೆ ಅಧಿಕಾರದಲ್ಲಿರುವ ಅಧ್ಯಕ್ಷರೊಬ್ಬರ ಫೋಟೋವನ್ನು ಮೊದಲ ಬಾರಿಗೆ ದೇಶದ ಅಧಿಕೃತ ಪಾಸ್‌ಪೋರ್ಟ್ ಪುಟಗಳಲ್ಲಿ ಮುದ್ರಿಸಲು ಮುಂದಾಗಿದೆ.

ಡೊನಾಲ್ಡ್ ಟ್ರಂಪ್ ಅವರ ಫೋಟೋ ಮತ್ತು ಸಹಿ ಇರುವ ವಿಶೇಷ ಆವೃತ್ತಿಯ ಪಾಸ್‌ಪೋರ್ಟ್‌ಗಳನ್ನು ಬಿಡುಗಡೆ ಮಾಡಲು ವೈಟ್ ಹೌಸ್ ನಿರ್ಧರಿಸಿದೆ.

ಈ ಕುರಿತು ಮಾಹಿತಿ ನೀಡಿದ ವಿದೇಶಾಂಗ ಇಲಾಖೆಯ ವಕ್ತಾರ ಟಾಮಿ ಪಿಗಾಟ್ ಅವರು, ಜುಲೈನಲ್ಲಿ ಅಮೆರಿಕದ 250 ವರ್ಷಗಳ ಸ್ವಾತಂತ್ರ‍್ಯೋತ್ಸವವನ್ನು ಆಚರಿಸಲಾಗುತ್ತಿದೆ. ಹೀಗಾಗಿ ವಿಶೇಷ ವಿನ್ಯಾಸದ ಪಾಸ್‌ಪೋರ್ಟ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಈ ಪಾಸ್‌ಪೋರ್ಟ್‌ಗಳಲ್ಲಿ ಸ್ವಾತಂತ್ರ‍್ಯ ಘೋಷಣೆ ಪತ್ರದ ಮೇಲೆ ಟ್ರಂಪ್ ಅವರ ಭಾವಚಿತ್ರವನ್ನು ಹಾಕಲಾಗುವುದು. ಬಳಿಕ ಸಹಿಯನ್ನು ಚಿನ್ನದ ಬಣ್ಣದಲ್ಲಿ ಮುದ್ರಿಸಲಾಗುವುದು. ಮತ್ತೊಂದು ಪುಟದಲ್ಲಿ ಅಮೆರಿಕದ ಸಂಸ್ಥಾಪಕ ಪಿತಾಮಹರ ಚಿತ್ರವನ್ನು ಹಾಕಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಈ ಪಾಸ್‌ಪೋರ್ಟ್‌ ಕೇವಲ 25,000 ದಿಂದ 30,000 ಪ್ರತಿಗಳಲ್ಲಿ ಮಾತ್ರ ಇರಲಿದ್ದು, ವಾಷಿಂಗ್ಟನ್ ಪಾಸ್‌ಪೋರ್ಟ್ ಏಜೆನ್ಸಿಯಲ್ಲಿ ಅರ್ಜಿ ಸಲ್ಲಿಸುವ ಅಮೆರಿಕದ ನಾಗರಿಕರಿಗೆ ಮಾತ್ರ ಸಿಗಲಿದೆ ಎಂದು ತಿಳಿಸಿದೆ.

ಅಮೆರಿಕದ ಈಗಿನ ಪಾಸ್‌ಪೋರ್ಟ್‌ಗಳಲ್ಲಿ ಅಪೊಲೊ 11, ಚಂದ್ರನ ಮೇಲೆ ಇಳಿಯುವುದು ಮತ್ತು ಐತಿಹಾಸಿಕ ತಾಣಗಳು ಮತ್ತು ಕ್ಷಣಗಳನ್ನು ಮುದ್ರಿಸಲಾಗಿದೆ. ಇದೀಗ ಮೊದಲ ಬಾರಿಗೆ ವ್ಯಕ್ತಿಯ ಭಾವಚಿತ್ರವನ್ನು ಹಾಕಲಾಗುತ್ತಿದೆ. ಈ ಮೂಲಕ ದೇಶದ ಸಾಂಪ್ರದಾಯಿಕ ಮೌಲ್ಯಗಳಿಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ವಿರೋಧಿಗಳು ಟೀಕಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !