April 30, 2026
Thursday, April 30, 2026
spot_img

ವಾಂಖೆಡೆಯಲ್ಲಿ ಸದ್ದು ಮಾಡಿದ ರಿಕಲ್ಟನ್ ಬ್ಯಾಟ್: ಹೈದರಾಬಾದ್​ ಗೆಲುವಿಗೆ 244 ರನ್ ಗಳ ಬೃಹತ್ ಟಾರ್ಗೆಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಂಖೆಡೆಯಲ್ಲಿ ಕೊನೆಗೂ ಮುಂಬೈ ಅಭಿಮಾನಿಗಳಿಗೆ ಪಾಂಡ್ಯ ಪಡೆ ಸಿಕ್ಸರ್ ಗಳ ರಸದೌತಣ ನೀಡಿದ್ದು, ರಯಾನ್ ರಿಕಲ್ಟನ್ ಭರ್ಜರಿ ಶತಕದಾಟದ ನೆರವಿನಿಂದ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 243 ರನ್​ಗಳ ಬೃಹತ್ ಮೊತ್ತ ದಾಖಲಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಮುಂಬೈಗೆ ಉತ್ತಮ ಆರಂಭ ಸಿಕ್ಕಿತ್ತು. ವಿಲ್ ಜಾಕ್ಸ್ ಹಾಗೂ ರಿಕಲ್ಟನ್ 93 ರನ್​ಗಳ ಜೊತೆಯಾಟ ನೀಡಿದರು. ಟೂರ್ನಿಯಲ್ಲಿ ಮೊದಲ ಪಂದ್ಯವನ್ನಾಡಿದ ವಿಲ್​ ಜಾಕ್ಸ್​ 46 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಬಳಿಕ ಬಂದ ಸೂರ್ಯಕುಮಾರ್ ಯಾದವ್ ಕೇವಲ 5 ರನ್ ಗಳಿಸಿ ನಿರಾಸೆ ಮೂಡಿಸಿದರು. ನಂತರ ನಮನ್​ ಧೀರ್ ರಿಕಲ್ಟನ್ ಜೊತೆಗೂಡಿ 55 ರನ್​ಗಳ ಜೊತೆಯಾಟ ನೀಡಿದರು. ನಮನ್ 22 ರನ್​ಗಳಿಸಿ ಕ್ಯಾಚ್ ನೀಡಿದರು. ನಾಯಕ ಹಾರ್ದಿಕ್ ಪಾಂಡ್ಯ 31 ರನ್​ಗಳಿಸಿ ಉತ್ತಮ ಸಾಥ್ ನೀಡಿದರು.

ಒಂದೆಡೆ ವಿಕೆಟ್ ಬೀಳುತ್ತಿದ್ದರೆ, ಅತ್ತ ಆರಂಭಿಕನಾಗಿ ಬಂದ ರಿಕಲ್ಟನ್ 55 ಎಸೆತಗಳಲ್ಲಿ 10 ಬೌಂಡರಿ, 8ಸಿಕ್ಸರ್​ಗಳ ಸಹಿತ ಅಜೇಯ 123 ರನ್​ಗಳಿಸಿ , ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !