August 25, 2026
Tuesday, August 25, 2026
spot_img

ಪ್ರೀವೆಡ್ಡಿಂಗ್‌ ಶೂಟ್‌ಗೆಂದು ಹೋಗುವಾಗ ಭೀಕರ ಅಪಘಾತ: ವರ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರೀ ವೆಡ್ಡಿಂಗ್‌ ಶೂಟ್‌ಗಾಗಿ ತಾನು ಮದುವೆಯಾಗುವ ಹುಡುಗಿಯನ್ನು ಕರೆದುಕೊಂಡು ಬರುವ ವೇಳೆ ಅಪಘಾತ ಸಂಭವಿಸಿದ್ದು, ವರ ಮೃತಪಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ.

ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದ ಮನು ಮೃತ ವರ. ಮನುಗೆ ಆಲೂರು ತಾಲೂಕಿನ ತೊಗರನಹಳ್ಳಿ ಗ್ರಾಮದ ಕಾಂಚನ ಜೊತೆ ಮದುವೆ ಫಿಕ್ಸ್‌ ಆಗಿತ್ತು. ಮೇ.10 ರಂದು ಇವರಿಬ್ಬರು ಹಸೆಮಣೆ ಏರುವವರಿದ್ದರು.

ಎರಡೂ ಕುಟುಂಬದಲ್ಲಿ ಮದುವೆಯ ಕೆಲಸಗಳು ಜೋರಾಗಿ ನಡೆಯುತ್ತಿದ್ದವು. ಇಂದು ಬೆಳಗ್ಗೆ ಮನು ಕಾಂಚನಾರನ್ನು ಪ್ರೀವೆಡ್ಡಿಂಗ್‌ ಶೂಟ್‌ಗೆ ಕರೆದುಕೊಂಡು ಹೋಗೋದಕ್ಕೆ ಕಾರಿನಲ್ಲಿ ಹೊರಟಿದ್ದರು.

ಮೂಗಲಿ ಗ್ರಾಮದ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ಇದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮನು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಎರಡೂ ಕುಟುಂಬಗಳಲ್ಲಿ ಸ್ಮಶಾನ ಮೌನ ಆವರಿಸಿದೆ. ಸಂಭ್ರಮದಿಂದ ಇರಬೇಕಿದ್ದ ಮನೆ ಇದೀಗ ಸೂತಕದಲ್ಲಿ ಮುಳುಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !