July 10, 2026
Friday, July 10, 2026
spot_img

CINE | ಪ್ರಿಯಾಂಕಾ-ಆಲಿಯಾ & ಕಟ್ರೀನಾ ಸಿನಿಮಾ ಸೆಟ್ಟೇರ್ತಾನೇ ಇಲ್ಲ! ಫರ್ಹಾನ್‌ ಅಖ್ತರ್‌ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಪ್ರಿಯಾಂಕಾ ಚೋಪ್ರಾ, ಕಟ್ರೀನಾ ಕೈಫ್‌ ಹಾಗೂ ಆಲಿಯಾ ಭಟ್‌ ನಟಿಸಬೇಕಿದ್ದ ಜೀ ಲೇ ಝರಾ ಸಿನಿಮಾ ಸೆಟ್ಟೇರುತ್ತಲೇ ಇಲ್ಲ ಎಂದು ನಿರ್ದೇಶಕ ಫರ್ಹಾನ್‌ ಅಖ್ತರ್‌ ಹೇಳಿದ್ದಾರೆ.

ಈ ಸಿನಿಮಾ ಸೆಟ್ಟೇರುವ ಬಗ್ಗೆ ವರ್ಷಗಳ ಹಿಂದೆ ಸುದ್ದಿಯಾಗಿತ್ತು. ಆದರೆ ಸಿನಿಮಾ ಮಾತ್ರ ಹೊರಗೆ ಬಂದಿರಲಿಲ್ಲ. ಮೂರು ಘಟಾನುಘಟಿ ನಟಿಯರನ್ನು ಇಟ್ಟುಕೊಂಡು ಸಿನಿಮಾ ಮಾಡೋದು ಅಂದ್ರೆ ತಮಾಷೆ ಅಲ್ಲ ಎಂದು ಫರ್ಹಾನ್‌ ಹೇಳಿದ್ದಾರೆ.

ಕ್ಲಾಸಿಕ್‌ ಸಿನಿಮಾವಾದ ಝಿಂದಗಿ ನಾ ಮಿಲೇಗಿ ದುಬಾರಾ ರೀತಿಯ ಕತೆ ಇದಾಗಿದೆ. ಇದಕ್ಕಾಗಿ ಫರ್ಹಾನ್‌ ಅಖ್ತರ್‌, ಝೋಯಾ ಅಖ್ತರ್‌ ಹಾಗೂ ರೀಮಾ ಕಾಗ್ತಿ ಸ್ಕ್ರಿಪ್ಟ್‌ ತಯಾರು ಮಾಡಿದ್ದಾರೆ. ಒಂದು ಕ್ಷಣದ ಕುತೂಹಲಕ್ಕಾಗಿ ಸಿನಿಮಾ ಒಪ್ಪಿಕೊಂಡೆ. ಅದಾದ ನಂತರ ನಾಲ್ಕು ವರ್ಷಗಳಿಂದ ಈ ಸಿನಿಮಾ ಸೆಟ್ಟೇರಿಸಲು ಪ್ರಯತ್ನಿಸುತ್ತಾ ಇದ್ದೀನಿ. ಆದರೆ ಯಾವುದೋ ಒಂದು ಕಾರಣದಿಂದ ಸಿನಿಮಾ ಮುಂದೆ ಹೋಗುತ್ತಿದೆ. ನನ್ನ ತಾಳ್ಮೆ ಪರೀಕ್ಷೆಯಾಗುತ್ತಿದೆ ಎಂದು ಫರ್ಹಾನ್‌ ಹೇಳಿದ್ದಾರೆ.

ಈ ಸಿನಿಮಾದಲ್ಲಿ ಪ್ರಿಯಾಂಕ, ಆಲಿಯಾ ಹಾಗೂ ಕಟ್ರೀನಾ ಮುಖ್ಯ ಪಾತ್ರದಲ್ಲಿದ್ದಾರೆ. ಮೂರು ಜನರ ಡೇಟ್ಸ್‌ ಹೊಂದಾಣಿಕೆ ಇನ್ನಿತರ ಸಮಸ್ಯೆಗಳು ಎದುರಾಗಿರುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !