May 1, 2026
Friday, May 1, 2026
spot_img

ಸಿಲಿಂಡರ್‌ ಬೆಲೆ ಏರಿಕೆ ಕೇಂದ್ರ ಸರ್ಕಾರದ ಜನವಿರೋಧಿ ನಿರ್ಧಾರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ‌

ಹೊಸದಿಗಂತ ವರದಿ ಬೆಳಗಾವಿ :

ವಾಣಿಜ್ಯ ಗ್ಯಾಸ್ ಸಿಲಿಂಡರ್ ದರವನ್ನು ₹2162ರಿಂದ ₹3153ಕ್ಕೆ ಏರಿಸಿರುವುದು, ಒಟ್ಟು ₹991ರ ಭಾರೀ ಏರಿಕೆ ಕೇಂದ್ರ ಸರ್ಕಾರದ ಜನವಿರೋಧಿ ನಿರ್ಧಾರವಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೇಂದ್ರದ ವಿರುದ್ದ ಗಂಭೀರವಾಗಿ ಖಂಡಿಸಿದರು. ‌

ಈ ಪ್ರಮಾಣದ ಬೆಲೆ ಏರಿಕೆ ಹಿಂದೆ ಎಂದೂ ಕಂಡಿಲ್ಲ. ಕೆಲವು ರಾಜ್ಯಗಳ ಚುನಾವಣೆ ಮುಗಿದ ತಕ್ಷಣ ಇಂತಹ ಜನವಿರೋಧಿ ನಿರ್ಧಾರ ತೆಗೆದುಕೊಂಡಿರುವುದು ಜನರಿಗೆ ನೀಡಿದ ಭರವಸೆಗಳನ್ನೇ ಮರೆತಂತಾಗಿದೆ. ಇದು ನೇರವಾಗಿ ಹೊಟೇಲ್ ಉದ್ಯಮದ ಮೇಲೆ ಹಾಗೂ ಸಾಮಾನ್ಯ ಜನರ ಬದುಕಿನ ಮೇಲೆ ಗದಾಪ್ರಹಾರ ಕೇಂದ್ರವು ಪ್ರಾರಂಭಿಸಿದೆ ಎಂದರು.‌

ಹೋಟೆಲ್ ಮಾಲೀಕರು ಈಗಾಗಲೇ ಬೆಲೆ ಏರಿಕೆಯ ಒತ್ತಡವನ್ನು ಎದುರಿಸುತ್ತಿದ್ದಾರೆ. ಈ ನಿರ್ಧಾರದಿಂದ ಆಹಾರ ಪದಾರ್ಥಗಳ ಬೆಲೆ ಮತ್ತಷ್ಟು ಏರಿಕೆಯಾಗಲಿದೆ. ಅದರ ಪರಿಣಾಮವಾಗಿ ದಿನನಿತ್ಯ ಜೀವನ ನಡೆಸುವ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಜನರ ಜೀವನೋಪಾಯವನ್ನು ಕಷ್ಟಕರಗೊಳಿಸುವ ಬದಲು, ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಆದರೆ, ಚುನಾವಣೆಯ ಬಳಿಕ ಜನರಿಗೆ ಮತ್ತೊಮ್ಮೆ ಮೋಸ ಮಾಡುತ್ತಿರುವುದು ಸ್ಪಷ್ಟವಾಗಿದೆ.
ತಕ್ಷಣವೇ ಈ ಅನ್ಯಾಯಕರ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಹಾಗೂ ಜನಪರ ನೀತಿಗಳನ್ನು ಅನುಸರಿಸಬೇಕು ಎಂದು ಸಚಿವೆ ಹೆಬ್ಬಾಳ್ಕರ್ ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !