June 24, 2026
Wednesday, June 24, 2026
spot_img

ಪತ್ನಿಗೆ ಮೂವರ ಜತೆ ಅನೈತಿಕ ಸಂಬಂಧ, ಬೇಸರಲ್ಲಿ 19 ಪುಟದ ಡೆತ್‌ನೋಟ್‌ ಬರೆದು ಪತಿ ಆತ್ಮಹ*ತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೈದರಾಬಾದ್‌ನ ಸಾಫ್ಟ್‌ವೇರ್‌ ಇಂಜಿನಿಯರ್‌ ಒಬ್ಬರು ತನ್ನ ಪತ್ನಿಯ ಅಫೇರ್‌ನಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪತ್ನಿಗೆ ಮೂವರು ಯುವಕರ ಜತೆ ಅನೈತಿಕ ಸಂಬಂಧ ಇರುವುದಾಗಿ ಆರೋಪಿಸಿ ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಸಾಯುವ ಮುನ್ನ 19 ಪುಟಗಳ ಡೆತ್‌ನೋಟ್‌ ಬರೆದಿಟ್ಟಿದ್ದಾರೆ.

ಟೆಕ್ಕಿ ಸೀತಾರಾಮ್‌ ಪತ್ನಿ ರೇಣುಕಾಗೆ ಮೂವರು ಪುರುಷರೊಂದಿಗೆ ಸಂಬಂಧವಿದೆ ಎಂದು ಬರೆದಿದ್ದಾರೆ. ಒಂದೂವರೆ ವರ್ಷದಿಂದ ಮೂವರು ಪುರುಷರ ಜತೆ ಸಂಬಂಧ ಹೊಂದಿದ್ದಾಳೆ. ರಮಣ್‌ ಎಂಬಾತ ರೇಣುಕಾ ಜತೆ ಇದ್ದ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದರು. ಇದನ್ನು ಸೀತಾರಾಮ್‌ ನೋಡಿದ್ದರು. ಆಘಾತಕ್ಕೊಳಗಾದ ಸೀತಾರಾಮ್‌ಗೆ ಪರ ಪುರುಷರು ತಾನು ಇಲ್ಲದಾಗ ಮನೆಗೆ ಬಂದು ಹೋಗುತ್ತಿದ್ದರು ಎಂದೂ ಗೊತ್ತಾಗಿದೆ. ನಾನು ನನ್ನ ಪತ್ನಿಯನ್ನು ಪ್ರೀತಿಸುತ್ತಿದ್ದೆ, ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ. ಆದರೆ ಹೀಗೆ ಮಾಡಿದ್ದು ನೋವಾಗಿದೆ ಎಂದು ಬರೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !