July 5, 2026
Sunday, July 5, 2026
spot_img

ಭಯ ಹುಟ್ಟಿಸುತ್ತಿದೆ ಎಲ್ ನಿನೋ ಗುಮ್ಮ: ಮಳೆ ಬದಲು ಭಾರತಕ್ಕೆ ‘ಕೆಂಡ’ದ ಕಳೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ವರ್ಷ ದೇಶದಲ್ಲಿ ಬಿಸಿಲಿನ ತಾಪ ಹೆಚ್ಚಿರುವುದರಿಂದ ಜನರು ಈಗಾಗಲೇ ಕಂಗೆಟ್ಟಿದ್ದಾರೆ. ಇದರ ನಡುವೆ ಭಾರತಕ್ಕೆ ಭೀಕರ ಬರಗಾಲ ತಟ್ಟುವ ಆತಂಕ ಕೂಡ ಇದೀಗ ಎದುರಾಗಿದೆ. ಈ ಬಿರಿ ಬಿಸಿಲಿನ ಮಧ್ಯೆಯೂ ಜನರಿಗೆ ಈಗ ಎಲ್‌ ನಿನೋ ಎಂಬ ಮತ್ತೊಂದು ಸಮಸ್ಯೆ ಉದ್ಭವಿಸಲಿದೆ.

ಸೂಪರ್ ಎಲ್‌ ನಿನೋ ಎಂಬುದು ಒಂದು ಹವಾಮಾನ ಪ್ರಕ್ರಿಯೆಯಾಗಿದ್ದು, ಇದು ಸಾಮಾನ್ಯವಾಗಿ ಮಹಾಸಾಗರದ ನೀರಿನ ತಾಪಮಾನ ಹೆಚ್ಚಾಗುವುದರೊಂದಿಗೆ ಈ ಎಲ್‌ ನಿನೋ ಉಂಟಾಗುತ್ತದೆ. ತಾಪಮಾನ ಹೆಚ್ಚಾದಾಗ ಅದು ಜಗತ್ತಿನ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಎಲ್‌ ನಿನೋ ತಾಪಮಾನವನ್ನು ಹೆಚ್ಚಿಸುತ್ತದೆ. ಆದರೆ ಸೂಪರ್ ಎಲ್‌ ನಿನೋ ಅದಕ್ಕಿಂತ ಹೆಚ್ಚಿನ ತಾಪಮಾನ ಉಂಟು ಮಾಡಿ, ಸಮುದ್ರದ ನೀರನ್ನು ತೀವ್ರವಾಗಿ ಬಿಸಿ ಮಾಡುತ್ತದೆ. ಆಗ ಅದು ಜಗತ್ತಿನ ಮೇಲೆ ತೀವ್ರವಾದ ಪರಿಣಾಮ ಉಂಟಾಗುತ್ತದೆ. ಇದನ್ನೇ ಸೂಪರ್ ಎಲ್‌ ನಿನೋ ಎಂದು ಹೇಳುತ್ತಾರೆ.

ಎಲ್‌ ನಿನೋ ಹೇಗೆ ಉಂಟಾಗುತ್ತದೆ?
ಸಾಮಾನ್ಯವಾಗಿ ಟ್ರೇಡ್ ವಿಂಡ್ಸ್ ಪಶ್ಚಿಮಕ್ಕೆ ಬೀಸುತ್ತದೆ. ಟ್ರೇಡ್ ವಿಂಡ್ಸ್ ಎಂದರೆ ಸದಾ ಒಂದೇ ದಿಕ್ಕಿನಲ್ಲಿ ಬೀಸುವ ಗಾಳಿಯಾಗಿದೆ. ಗಾಳಿ ಬೀಸುವುದರಿಂದ ನೀರಿನ ಚಲನೆ ಉಂಟಾಗುತ್ತದೆ. ಆಗ ಹವಾಮಾನ ಹಾಗೂ ಮಳೆಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ಎಲ್‌ ನಿನೋ ಸಮಯದಲ್ಲಿ ಈ ಗಾಳಿ ದುರ್ಬಲವಾಗಿ ಬೀಸುತ್ತವೆ. ಎಲ್‌ ನಿನೋನಿಂದಾಗಿ ಸಮುದ್ರದ ತಾಪಮಾನ ಹೆಚ್ಚಾಗಿ ಹವಾಮಾನದಲ್ಲಿ ಬದಲಾವಣೆ ಉಂಟಾಗುತ್ತದೆ.

ಉಷ್ಣಾಂಶ ಹೆಚ್ಚಿಸಬಲ್ಲ ಹಾಗೂ ಮುಂಗಾರು ಮಾರುತಗಳಿಗೆ ಅಡ್ಡಿಪಡಿಸಬಲ್ಲ ನೈಸರ್ಗಿಕ ಹವಾಮಾನ ಮಾದರಿ `ಸೂಪರ್ ಎಲ್‌ನಿನೋ’ ಇದೀಗ ಪೆಸಿಫಿಕ್ ಮಹಾಸಾಗರದಲ್ಲಿ ಪ್ರಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಹವಾಮಾನ ಪರಿಸ್ಥಿತಿ ಮೇಲೆ ವಿಜ್ಞಾನಿಗಳು ನಿಗಾ ಇಟ್ಟಿದ್ದಾರೆ.

ಇದಕ್ಕೂ ಮುನ್ನ 1982-83ರಲ್ಲಿ, ಹಾಗೂ 1977-78ರಲ್ಲಿ, 2015-16ರಲ್ಲಿ ಈ ಸೂಪರ್ ಎಲ್‌ ನಿನೋ ಕಾಣಿಸಿಕೊಂಡಿತ್ತು. ಈ ಸಮಯದಲ್ಲಿ ಭಾರತ ಸೇರಿದಂತೆ ಆಸ್ಟ್ರೇಲಿಯಾ, ಇಂಡೋನೇಷ್ಯಾ ಹೀಗೆ ಹಲವು ದೇಶಗಳದಲ್ಲಿ ಬರಗಾಲ ಪರಿಸ್ಥಿತಿ ಎದುರಾಗಿತ್ತು. ಮಾನ್ಸೂನ್ ಮಾರುತಗಳ ದುರ್ಬಲಗೊಂಡು ಮಳೆ ಕೊರತೆ ಉಂಟಾಗಿತ್ತು. ಇನ್ನು ಪೆರು, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಭಾರಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಇನ್ನು 2015-16ರಲ್ಲಿ ಉಷ್ಣತೆ ಹೆಚ್ಚಾಗಿ ಜಾಗತಿಕ ಹವಾಮಾನ ಅಸ್ತವ್ಯಸ್ತವಾಗಿತ್ತು.

ಭಾರತದ ಮೇಲೆ ಎಲ್‌ನಿನೋ ಪರಿಣಾಮವೇನು?

ಭಾರತದ ಮೇಲೆ ಶೇ. 50ರಷ್ಟು ಎಲ್‌ನಿನೋ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ವರ್ಷ ಮುಂಗಾರು ಮಳೆ ವಾಡಿಕೆಗಿಂತ 8-10% ಕಡಿಮೆಯಾಗುವ ಆತಂಕ ಉಂಟಾಗಿದೆ.
ಮೇ- ಜೂನ್‌ ಅವಧಿಯಲ್ಲಿ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಇದೆ.
ರಾತ್ರಿ ತಾಪಾಮಾನವು ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾದ್ಯತೆ ಇದೆ.
ಮುಂಗಾರು ಅವಲಂಬಿತ ಕೃಷಿ ಪ್ರದೇಶವು ಹೆಚ್ಚು ಸಂಕಷ್ಟಕ್ಕೀಡಾಗುವ ಆತಂಕ ಉಂಟಾಗಿದೆ.
ಮುಂಗಾರು ಅಭಾವದಿಂದ ಕೃಷಿ ಉತ್ಪನ್ನಗಳು ಕುಸಿಯುವ ಭೀತಿ ಹೆಚ್ಚಾಗಿದೆ.
ಜಲಾಶಯ, ಕೆರೆಗಳು ಖಾಲಿಯಾಗುವ ಪರಿಸ್ಥಿತಿ ಇದ್ದು, ಕುಡಿಯುವ ಹಾಗೂ ನೀರಾವರಿ ಸಮಸ್ಯೆ ಉಂಟಾಗುವ ಆತಂಕ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !