October 10, 2026
Saturday, October 10, 2026
spot_img

ACCIDENT | ರಸ್ತೆ ದಾಟುವಾಗ ತಲೆತಿರುಗಿ ಬಿದ್ದ ಬಾಲಕನ ಮೇಲೆ ಹರಿದ ಖಾಸಗಿ ಬಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಪ್ಪನಿಗೆ ಔಷಧ ತರೋದಕ್ಕೆ ಹೋದ ಬಾಲಕನೊಬ್ಬ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾನೆ.

ಬೆಂಗಳೂರಿನ ಬಾಗಲೂರು-ಹೆಣ್ಣೂರು ರಸ್ತೆಯಲ್ಲಿ ಔಷಧ ತರಲು 16 ವರ್ಷದ ವರುಣ್‌ ಮೃತ ಬಾಲಕ. ಅಪ್ಪನಿಗೆ ಹುಷಾರಿಲ್ಲ ಎಂದು ವರುಣ್‌ ಹೊರಗೆ ಹೋಗಿದ್ದ, ಈ ವೇಳೆ ರಸ್ತೆಯಲ್ಲಿ ತಲೆ ತಿರುಗಿ ಬಿದ್ದಿದ್ದಾನೆ. ಬೀಳುತ್ತಿದ್ದಂತೆಯೇ ಏಕಾಏಕಿ ಬಂದ ಖಾಸಗಿ ಬಸ್‌ ಆತನ ಮೇಲೆ ಹರಿದು ಹೋಗಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

ಬಾಗಲೂರು ಹೆಣ್ಣೂರು ರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಕೆಲಸ ನಡೆಯುತ್ತಿದ್ದು, ಎರಡೂ ಭಾಗದ ವಾಹನಗಳು ಒಂದೇ ಕಡೆ ಸಾಗುತ್ತಿವೆ. ಇದರಿಂದ ವಾಹನದಟ್ಟಣೆ ಹೆಚ್ಚಾಗಿತ್ತು ಎನ್ನಲಾಗಿದೆ.

ಮಾತ್ರೆ ತರಲು ಹೋದ ಮಗ ಹೆಣವಾಗಿರುವುದನ್ನು ಕಂಡು ಪೋಷಕರು ಕಂಗಾಲಾಗಿದ್ದಾರೆ.

Must Read