September 19, 2026
Saturday, September 19, 2026
spot_img

ಸಾಲ ತೀರಿಸೋದಕ್ಕೆ ಅಳಿಯನ ಮನೆಗೇ ಕನ್ನ ಹಾಕಿದ ಚಾಲಾಕಿ ಅತ್ತೆಮ್ಮ!

ಹೊಸದಿಗಂತ ವರದಿ ಬೆಳಗಾವಿ :

ತಾನು‌ ಮಾಡಿದ ಸಾಲವನ್ನು ತೀರಿಸುವುದಕ್ಕೆ ಸ್ವತಃ ಅಳಿಯನ‌ ಮನೆಗೆ ಅತ್ತೆಯು ಕನ್ನ ಹಾಕಿರುವ ಘಟನೆಯೊಂದು ಬೆಳಗಾವಿ ನಗರದ ಪಿರಣವಾಡಿಯಲ್ಲಿ ನಡೆದಿದೆ.‌

ಪಿರಣವಾಡಿ ನಿವಾಸಿ ಉಜ್ವಲಾ ಎಂಬವರೇ ಕಳ್ಳತನ ಮಾಡಿದ ಚಾಲಾಕಿ ಅತ್ತೆ. ದಂಪತಿಗಳು ಅತ್ತೆಗೆ ಮನೆಯಲ್ಲೇ ಇರುವಂತೆ ಹೇಳಿ ಸ್ನೇಹಿತರ ಮದುವೆಗೆಂದು ಹೋಗಿದ್ದಾರೆ. ಆದ್ರೆ ಮನೆಯಲ್ಲಿ ಯಾರೂ ಇಲ್ಲದಿರೋ ಸಮಯಕ್ಕಾಗಿ ಕಾಯ್ತಿದ್ದ ಉಜ್ವಲಾ ಕಮ್ಮಾರ ಅಳಿಯ ಮನೆಯನ್ನು ಇಂಚಿಂಚು ಶೋಧ ಮಾಡಿ ಸಿಕ್ಕ ಸಿಕ್ಕಿದ್ದನ್ನ ವಸ್ತುಗಳನ್ನು ದೋಚಿಕೊಂಡಿದ್ದಾಳೆ.‌

ಕಳ್ಳಿ ಅತ್ತೆಗೆ ಶಿವಾ ಅಪ್ಪಯ ಕೂಡ ಸಾಥ್​ ನೀಡಿದ್ದಾರೆ ಎಂದು ಹೇಳಲಾಗಿದೆ. ಮನೆಯಲ್ಲಿನ ಬೀರುಬಿನಲ್ಲಿ ಇಟ್ಟಿದ್ದ ಪುತ್ರಿಯ ಚಿನ್ನ ಬಳೆ
ಉಂಗುರ,‌ ನೆಕ್ಲೇಸ್ ಸೇರಿ ಒಟ್ಟು 16.57 ಲಕ್ಷ ರೂ ಮೌಲ್ಯದ 110 ಗ್ರಾಂ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದಾಳೆ ಎನ್ನಲಾಗಿದೆ.

ಮಗಳು ಮತ್ತು ಅಳಿಯ ಮದುವೆ ಮುಗಿಸಿಕೊಂಡು ಬಂದು ಮನೆಯಲ್ಲಿ ನೋಡಿದ್ದಾಗ ಚಿನ್ನಾಭರಣ ಕಳ್ಳತನವಾಗಿರೋದು ಸ್ಪಷ್ಟವಾಗಿದೆ.‌
ಈ ಕುರಿತು ದಂಪತಿಗಳು ಕೂಡಲೇ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ತಿಳಿಕವಾಡಿ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ ವೇಳೆ ಕಳ್ಳಿ‌ ಅತ್ತೆ ಕಳ್ಳತನ ಮಾಡಿರುವುದರ ಬಗ್ಗೆ ಬಾಯಿ ಬಿಟ್ಟಿದ್ದಾಳೆ.

ಅಳಿಯನ ಮನೆಯಲ್ಲಯೇ ಕಳ್ಳತನಕ್ಕೆ ಸಾಥ್ ನೀಡಿದ ಶಿವಾ ಅಪ್ಪಯನವರ, ಹಾಗೂ ಕಳ್ಳಿ ಅತ್ತೆ ಉಜ್ವಲಾ ಕಮ್ಮಾರ, ಇಬ್ಬರನ್ನು ತಿಳಕವಾಡಿ ಪೊಲೀಸರು ಬಂಧಿಸಿ ವಿಚಾರಣೆ ಮುಂದು ವರೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !