October 10, 2026
Saturday, October 10, 2026
spot_img

ಅಮೆರಿಕ ನಂಬಿಕೆಗೆ ಯೋಗ್ಯವಲ್ಲ: ಮತ್ತೆ ಯುದ್ಧದ ಮುನ್ಸೂಚನೆ ನೀಡಿದ ಇರಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಮತ್ತೆ ತಾರಕ್ಕೇರುವ ಮುನ್ಸೂಚನೆ ಇದ್ದು, ಅಮೆರಿಕ ವಿರುದ್ಧ ಮತ್ತೆ ಇರಾನ್ ಆಕ್ರೋಶ ಹೊರಹಾಕಿದೆ.

ವಾಷಿಂಗ್ಟನ್ ಒಪ್ಪಂದಗಳಿಗೆ ಬೆಲೆ ನೀಡುವುದಿಲ್ಲ. ಅವರ ನಡೆ ಗಮನಿಸಿದರೆ, ಮತ್ತೆ ಯುದ್ಧ ಪುನರಾರಂಭವಾಗುವುದು ಎಂದು ಇರಾನ್ ಮಿಲಿಟರಿ ಪ್ರಧಾನ ಕಚೇರಿಯ ಉಪ ಮುಖ್ಯಸ್ಥ ಮೊಹಮ್ಮದ್ ಜಾಫರ್ ಅಸಾದಿ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ಅಧಿಕಾರಿಗಳ ಹೇಳಿಕೆಗಳು ಕೇವಲ ಮಾಧ್ಯಮಗಳ ಮುಂದೆ ಸೀಮಿತವಾಗಿದೆ. ಯಾವುದು ಕೂಡ ಕಾರ್ಯರೂಪವಾಗುತ್ತಿಲ್ಲ. ಅವರ ಮೂಲ ಉದ್ದೇಶ ತಾವು ಸೃಷ್ಟಿಸಿದ ಗೊಂದಲಗಳಿಂದ ಹೊರಬರುವುದು ಬಿಟ್ಟರೆ, ಬೇರೆ ಯಾವ ಒಳಿತನ್ನು ಬಯಸುವುದಿಲ್ಲ ಎಂದು ಟೀಕಿಸಿದರು.

ಹೀಗಾಗಿ ಇರಾನ್ ಸಶಸ್ತ್ರ ಪಡೆಗಳು ಯುದ್ಧಕ್ಕೆ ಸನ್ನದ್ದಾಗಿ ನಿಂತಿದ್ದು, ಅಮೆರಿಕದಿಂದ ಯಾವುದೇ ದಾಳಿ ನಡೆದರೂ ಪ್ರತಿದಾಳಿ ನಡೆಸಲು ಸಜ್ಜಾಗಿದೆ ಎಂದು ಎಚ್ಚರಿಕೆ ನೀಡಿದರು.

Must Read