May 2, 2026
Saturday, May 2, 2026
spot_img

ಎಕ್ಸಿಟ್ ಪೋಲ್ ​ನಂಬಬೇಡಿ, ಈ ಬಾರಿ 200+ ಸ್ಥಾನಗಳಲ್ಲಿ ಟಿಎಂಸಿಗೆ ಗೆಲುವು: ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಕುರಿತು ಚುನಾವಣೋತ್ತರ ಸಮೀಕ್ಷೆ ನೀಡಿದ ಭವಿಷ್ಯ ನಿಜವಾಗದು, ಈ ಬಾರಿ ತಮ್ಮ ಪಕ್ಷ ಟಿಎಂಸಿ​ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟಿಎಂಸಿ ಮತಎಣಿಕೆ ಏಜೆಂಟ್​​ಗಳ ಜೊತೆ ವಿಡಿಯೋ ಕಾನ್ಫ್​ರೆನ್ಸ್​ ಮೂಲಕ ಮಾತನಾಡಿರುವ ಅವರು, ಈ ಬಾರಿ ನಮ್ಮ ಪಕ್ಷವು 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಾಗಿದೆ . ಎಕ್ಸಿಟ್ ಪೋಲ್​ಗಳನ್ನು ನಂಬಬೇಡಿ, ಅದೆಲ್ಲವೂ ಷೇರು ಮಾರುಕಟ್ಟೆಯನ್ನು ಕುಶಲತೆಯಿಂದ ನಿರ್ವಹಿಸುವ ಪ್ರಯತ್ನ ಎಂದು ಹೇಳಿದ್ದಾರೆ.

2021, 2024ರ ಚುನಾವಣೆಯಲ್ಲೂ ಕೂಡ ನಮಗೆ ಸೋಲು ಆಗಲಿದೆ ಎಂದು ಹೇಳಿದ್ದವು, ಆದರೆ ನಡೆದದ್ದು ಬೇರೆ, ನಾವು ಗೆದ್ದೆವು ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !