ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಕುರಿತು ಚುನಾವಣೋತ್ತರ ಸಮೀಕ್ಷೆ ನೀಡಿದ ಭವಿಷ್ಯ ನಿಜವಾಗದು, ಈ ಬಾರಿ ತಮ್ಮ ಪಕ್ಷ ಟಿಎಂಸಿ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟಿಎಂಸಿ ಮತಎಣಿಕೆ ಏಜೆಂಟ್ಗಳ ಜೊತೆ ವಿಡಿಯೋ ಕಾನ್ಫ್ರೆನ್ಸ್ ಮೂಲಕ ಮಾತನಾಡಿರುವ ಅವರು, ಈ ಬಾರಿ ನಮ್ಮ ಪಕ್ಷವು 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಾಗಿದೆ . ಎಕ್ಸಿಟ್ ಪೋಲ್ಗಳನ್ನು ನಂಬಬೇಡಿ, ಅದೆಲ್ಲವೂ ಷೇರು ಮಾರುಕಟ್ಟೆಯನ್ನು ಕುಶಲತೆಯಿಂದ ನಿರ್ವಹಿಸುವ ಪ್ರಯತ್ನ ಎಂದು ಹೇಳಿದ್ದಾರೆ.
2021, 2024ರ ಚುನಾವಣೆಯಲ್ಲೂ ಕೂಡ ನಮಗೆ ಸೋಲು ಆಗಲಿದೆ ಎಂದು ಹೇಳಿದ್ದವು, ಆದರೆ ನಡೆದದ್ದು ಬೇರೆ, ನಾವು ಗೆದ್ದೆವು ಎಂದು ಹೇಳಿದ್ದಾರೆ.



