ಮಶ್ರೂಮ್ ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ಇದರಲ್ಲಿ ಪ್ರೋಟೀನ್, ಫೈಬರ್, ವಿಟಮಿನ್ D, ಬಿ ಕಾಂಪ್ಲೆಕ್ಸ್ ಹಾಗೂ ಖನಿಜಾಂಶಗಳು ಸಮೃದ್ಧವಾಗಿವೆ. ಆದರೆ ಮಶ್ರೂಮ್ ಅನ್ನು ಸರಿಯಾಗಿ ತೊಳೆಯದೇ ಅಡುಗೆ ಮಾಡಿದರೆ ಅದರ ರುಚಿ, ತಾಜಾತನ ಮತ್ತು ಪೌಷ್ಟಿಕಾಂಶದ ಮೇಲೆ ಪರಿಣಾಮ ಬೀರುತ್ತದೆ. ಹಲವರು ನೀರಿನಲ್ಲಿ ನೆನೆಸಿಟ್ಟು ತೊಳೆಯುತ್ತಾರೆ. ಇದು ಸರಿಯಾದ ವಿಧಾನವಲ್ಲ. ಮಶ್ರೂಮ್ ಕ್ಲೀನ್ ಮಾಡುವ ಸರಿಯಾದ ಕ್ರಮ ತಿಳಿದುಕೊಳ್ಳೋಣ.
ಮೊದಲು ಒಣ ಬಟ್ಟೆಯಿಂದ ಸ್ವಚ್ಛಗೊಳಿಸಿ
ಮಶ್ರೂಮ್ ಮೇಲೆ ಮಣ್ಣು ಅಥವಾ ಧೂಳು ಅಂಟಿಕೊಂಡಿರಬಹುದು. ಅದನ್ನು ಮೊದಲು ಸ್ವಚ್ಛವಾದ ಒಣ ಬಟ್ಟೆ ಅಥವಾ ಕಿಚನ್ ಟಿಶ್ಯೂ ಬಳಸಿ ಸೌಮ್ಯವಾಗಿ ಒರೆಸಿ ತೆಗೆದುಹಾಕಿ.
ನೀರಿನಲ್ಲಿ ಹೆಚ್ಚು ಹೊತ್ತು ನೆನೆಸಬೇಡಿ
ಮಶ್ರೂಮ್ ಸ್ಪಾಂಜ್‌ನಂತೆ ನೀರನ್ನು ಹೀರಿಕೊಳ್ಳುತ್ತದೆ. ಹೆಚ್ಚು ಹೊತ್ತು ನೀರಿನಲ್ಲಿ ಇಟ್ಟರೆ ಅದು ಮೆತ್ತಗಾಗುತ್ತದೆ, ರುಚಿಯೂ ಬದಲಾಗುತ್ತದೆ.
ಹರಿಯುವ ನೀರಿನಲ್ಲಿ ಕ್ಷಣ ಮಾತ್ರ ತೊಳೆಯಿರಿ
ತುಂಬಾ ಕೊಳಕಾಗಿದ್ದರೆ ಮಾತ್ರ ತಣ್ಣನೆಯ ಹರಿಯುವ ನೀರಿನಲ್ಲಿ ಬೇಗನೆ ತೊಳೆದು ತಕ್ಷಣ ಒರೆಸಿ. ಹೆಚ್ಚು ಕಾಲ ನೀರಿನಲ್ಲಿ ಬಿಡಬೇಡಿ.
ಕೆಳಭಾಗದ ಕಡ್ಡಿ ಕತ್ತರಿಸಿ
ಮಶ್ರೂಮ್‌ನ ಕೆಳಭಾಗದ ಕಾಂಡದಲ್ಲಿ ಗಟ್ಟಿ ಭಾಗ ಇದ್ದರೆ ಸ್ವಲ್ಪ ಕತ್ತರಿಸಿ ತೆಗೆದುಹಾಕಿ.
ಇದನ್ನೂ ಓದಿ:
ತೊಳೆದ ತಕ್ಷಣ ಬಳಸುವುದು ಉತ್ತಮ
ತೊಳೆದು ಬಹಳ ಹೊತ್ತು ಇಡಬೇಡಿ. ತಕ್ಷಣ ಅಡುಗೆ ಮಾಡಿದರೆ ರುಚಿ, ಪೌಷ್ಟಿಕಾಂಶ ಎರಡೂ ಉಳಿಯುತ್ತವೆ.



