September 29, 2026
Tuesday, September 29, 2026
spot_img

summer drink | ದ್ರಾಕ್ಷಿ, ಆಪಲ್ ಅಲ್ಲ ಈ ಪೇರಳೆ ಹಣ್ಣಿನ ಜ್ಯೂಸ್ ಮಾಡಿ ನೋಡಿ

ಬೇಸಿಗೆಯ ಬಿಸಿಯಲ್ಲಿ ದೇಹಕ್ಕೆ ತಂಪು ನೀಡುವ ಜೊತೆಗೆ ಪೌಷ್ಟಿಕಾಂಶವೂ ತುಂಬಿರುವ ಪಾನೀಯ ಬೇಕೆಂದರೆ ಪೇರಳೆ ಜ್ಯೂಸ್ ಬೆಸ್ಟ್. ವಿಟಮಿನ್ ಸಿ, ಫೈಬರ್ ಹಾಗೂ ಆಂಟಿಆಕ್ಸಿಡೆಂಟ್ಸ್‌ ಸಮೃದ್ಧವಾಗಿರುವ ಈ ಜ್ಯೂಸ್ ಆರೋಗ್ಯಕ್ಕೂ ಹಿತಕರ. ಮನೆಯಲ್ಲೇ ಕೆಲವೇ ನಿಮಿಷಗಳಲ್ಲಿ ರುಚಿಕರವಾಗಿ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು:
ಹಣ್ಣಾದ ಪೇರಳೆ – 2
ಸಕ್ಕರೆ ಅಥವಾ ಜೇನುತುಪ್ಪ – 2 ರಿಂದ 3 ಚಮಚ
ನಿಂಬೆ ರಸ – 1 ಚಮಚ
ಕಪ್ಪು ಉಪ್ಪು – ಅರ್ಧ ಟೀಸ್ಪೂನ್
ಜೀರಿಗೆ ಪುಡಿ – ಚಿಟಿಕೆ
ಪುದೀನಾ ಎಲೆಗಳು – ಸ್ವಲ್ಪ
ತಣ್ಣೀರು – ಅಗತ್ಯಕ್ಕೆ ತಕ್ಕಷ್ಟು
ಐಸ್ ಕ್ಯೂಬ್‌ಗಳು – ಬೇಕಿದ್ದರೆ

ಮಾಡುವ ವಿಧಾನ:

ಮೊದಲು ಪೇರಳೆ ಹಣ್ಣನ್ನು ಚೆನ್ನಾಗಿ ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಬಳಿಕ ಮಿಕ್ಸಿ ಜಾರ್‌ಗೆ ಪೇರಳೆ ತುಂಡುಗಳು, ಸಕ್ಕರೆ ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಜರಡಿಯಿಂದ ಸೋಸಿ ಬೀಜಗಳನ್ನು ಬೇರ್ಪಡಿಸಿ. ನಂತರ ಅದಕ್ಕೆ ನಿಂಬೆ ರಸ, ಕಪ್ಪು ಉಪ್ಪು, ಜೀರಿಗೆ ಪುಡಿ ಮತ್ತು ಅಗತ್ಯವಿದ್ದಷ್ಟು ತಣ್ಣೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಪುದೀನಾ ಎಲೆಗಳು ಹಾಗೂ ಐಸ್ ಕ್ಯೂಬ್‌ಗಳನ್ನು ಹಾಕಿ ತಂಪಾಗಿ ಸರ್ವ್ ಮಾಡಿ.

ಆರೋಗ್ಯ ಲಾಭ:

ಈ ಜ್ಯೂಸ್ ರೋಗನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಜೀರ್ಣಕ್ರಿಯೆಗೂ ಸಹಕಾರಿ. ದಿನದ ಶುಭಾರಂಭಕ್ಕೆ ಅಥವಾ ಸಂಜೆ ಹೊತ್ತಿಗೆ ಇದು ಬೆಸ್ಟ್ ಡ್ರಿಂಕ್.

Must Read