May 4, 2026
Monday, May 4, 2026
spot_img

CINE | ಮಗು ಹುಟ್ಟಿದ ಬಳಿಕ ಇದೇ ಮೊದಲ ಬಾರಿಗೆ ಹೊರಗೆ ಕಾಣಿಸಿಕೊಂಡ ಕತ್ರೀನಾ ಕೈಫ್‌


ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ನ ಸ್ಟಾರ್‌ ದಂಪತಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಮ್ಮ ಮಗುವಿನ ಆಗಮನದ ಬಳಿಕ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಮೊದಲ ಬಾರಿಗೆ ಈ ದಂಪತಿ ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ಕ್ಯೂಟ್‌ ಜೋಡಿ ಎಂದೇ ಖ್ಯಾತಿ ಪಡೆದಿರುವ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಅವರ ಲೇಟೆಸ್ಟ್ ದರುಶನವು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

ಕಳೆದ ನವೆಂಬರ್ 2025ರಲ್ಲಿ ತಾಯಿಯಾದ ನಂತರ ಕತ್ರಿನಾ ಕ್ಯಾಮರಾ ಕಣ್ಣುಗಳಿಂದ ದೂರ ಉಳಿದು ತಮ್ಮ ಖಾಸಗಿ ಸಮಯವನ್ನು ಅನುಭವಿಸುತ್ತಿದ್ದರು. ಆದರೆ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಕ್ಕಿ ಕೌಶಲ್ ಅವರೊಂದಿಗೆ ಕಾಣಿಸಿಕೊಂಡಾಗ ಅವರ ಮುಖದಲ್ಲಿನ ವಿಶೇಷ ಕಳೆ ಎದ್ದು ಕಾಣುತ್ತಿತ್ತು. ಈ ಜೋಡಿಯ ಸ್ಟೈಲಿಶ್ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

https://www.instagram.com/reels/DX4zY30yNOi

ನಟಿ ಕತ್ರಿನಾ ಕಪ್ಪು ಬಣ್ಣದ ಓವರ್‌ಸೈಜ್ ಟ್ರೆಂಚ್ ಕೋಟ್ ಮತ್ತು ಸ್ನೀಕರ್ಸ್ ಧರಿಸಿ ಅತ್ಯಂತ ಸುಂದರವಾಗಿ ಕಾಣುತ್ತಿದ್ದರು. ಇನ್ನು ವಿಕ್ಕಿ ಕೌಶಲ್ ಕಪ್ಪು ಟಿ-ಶರ್ಟ್, ಸಡಿಲವಾದ ಪ್ಯಾಂಟ್ ಮತ್ತು ಬ್ರೌನ್ ಜಾಕೆಟ್ ಧರಿಸಿ ಪತ್ನಿಗೆ ಸಾಥ್ ನೀಡಿದರು. ಈ ದಂಪತಿ ಕ್ಯಾಮೆರಾಗಳಿಗೆ ಪೋಸ್ ನೀಡಿ ನಂತರ ಅಲ್ಲಿಂದ ನಿರ್ಗಮಿಸಿದರು.

ಈ ವೀಡಿಯೊ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ಕತ್ರಿನಾ ಅವರ ಸೌಂದರ್ಯವನ್ನು ಹೊಗಳುತ್ತಿದ್ದಾರೆ. “ನಮ್ಮ ಪ್ರೀತಿಯ ಸೂಪರ್‌ಸ್ಟಾರ್ ಅನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆವು,” ಎಂದು ಒಬ್ಬರು ಕಮೆಂಟ್ ಮಾಡಿದರೆ, “ಬಹಳ ದಿನಗಳ ನಂತರ ಈ ಸುಂದರ ಜೋಡಿಯನ್ನು ನೋಡಲು ಖುಷಿಯಾಗುತ್ತಿದೆ” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !