May 4, 2026
Monday, May 4, 2026
spot_img

FOOD | ಈ ಬಗಾರ ರೈಸ್‌ ಮುಂದೆ ಯಾವ ಬಿರಿಯಾನಿನೂ ಲೆಕ್ಕಕ್ಕಿಲ್ಲ

ಬಗಾರ ರೈಸ್ ಹೈದರಾಬಾದ್ ಮತ್ತು ತೆಲಂಗಾಣ ಭಾಗದ ಅತ್ಯಂತ ಜನಪ್ರಿಯ ಮತ್ತು ಸಾಂಪ್ರದಾಯಿಕ ಖಾದ್ಯವಾಗಿದೆ. ಈ ಖಾದ್ಯವು ಬಿರಿಯಾನಿಗಿಂತ ಸರಳವಾಗಿದ್ದರೂ, ಮಸಾಲೆಗಳ ಘಮ ಮತ್ತು ರುಚಿಯಲ್ಲಿ ಅದಕ್ಕೆ ಸರಿಸಾಟಿಯಿಲ್ಲ. ಇದರಲ್ಲಿ ತರಕಾರಿ ಅಥವಾ ಮಾಂಸವನ್ನು ಬಳಸುವುದಿಲ್ಲ, ಬದಲಾಗಿ ಮಸಾಲೆ, ಪುದೀನ ಮತ್ತು ಕೊತ್ತಂಬರಿ ಸೊಪ್ಪಿನಿಂದಲೇ ಘಮವನ್ನು ಪಡೆಯುತ್ತದೆ. ಇದು ತೆಲಂಗಾಣದ ಮದುವೆ ಸಮಾರಂಭಗಳಲ್ಲಿ ಮತ್ತು ಹಬ್ಬಗಳಲ್ಲಿ ತಪ್ಪದೇ ಮಾಡುವ ಒಂದು ವಿಶೇಷ ಅಡುಗೆಯಾಗಿದೆ.

ಬೇಕಾಗುವ ಸಾಮಾಗ್ರಿಗಳು
ಬಾಸುಮತಿ ಅಕ್ಕಿ
ಪಲಾವ್ ಎಲೆ
ಷಾ ಜೀರಾ
ದಾಲ್ಚಿನ್ನಿ
ಲವಂಗ
ಏಲಕ್ಕಿ
ಸ್ಟಾರ್ ಸೋಂಪು
ಈರುಳ್ಳಿ
ಹಸಿಮೆಣಸಿನಕಾಯಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಪುದೀನ ಮತ್ತು ಕೊತ್ತಂಬರಿ ಸೊಪ್ಪು
ತುಪ್ಪ ಅಥವಾ ಎಣ್ಣೆ,
ಉಪ್ಪು
ನಿಂಬೆ ರಸ

ತಯಾರಿಸುವ ವಿಧಾನ
ಒಂದು ಬಾಣಲೆ ಅಥವಾ ಕುಕ್ಕರ್‌ನಲ್ಲಿ ತುಪ್ಪ/ಎಣ್ಣೆ ಬಿಸಿ ಮಾಡಿ, ಇಡೀ ಮಸಾಲೆಗಳಾದ ಪಲಾವ್ ಎಲೆ, ಷಾ ಜೀರಾ, ದಾಲ್ಚಿನ್ನಿ, ಲವಂಗ, ಏಲಕ್ಕಿ, ಸ್ಟಾರ್ ಸೋಂಪು ಹಾಕಿಕೊಂಡು ಬಾಡಿಸಿಕೊಳ್ಳಬೇಕು. ಬಳಿಕ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ, ಈರುಳ್ಳಿ ಹೊಂಬಣ್ಣಕ್ಕೆ ಬರುವವರೆಗೆ ಹುರಿಯಬೇಕು. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಪುದೀನ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿಕೊಂಡು. ಬಳಿಕ 20 ರಿಂದ 30ನಿಮಿಷ ನೆನೆಸಿದ ಅಕ್ಕಿಯನ್ನು ಸೇರಿಸಿ ಮಿಕ್ಸ್ ಮಾಡಿಕೊಂಡ ಬಳಿಕ ಅಳತೆಗೆ ತಕ್ಕಂತೆ ನೀರು ಸೇರಿಸಿ, ಉಪ್ಪು ಮತ್ತು ನಿಂಬೆ ರಸವನ್ನು ಹಾಕಿ, ಅನ್ನ ಹದವಾಗಿ ಬೇಯುವವರೆಗೆ ಬೇಯಿಸಿಕೊಂಡರೆ ರುಚಿಕರವಾದ ಹೈದಾರವಾದ್‌ ಸ್ಟೈಲ್ ಬಗಾರ ರೈಸ್ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !