September 25, 2026
Friday, September 25, 2026
spot_img

Dinner Recipe | ರಾತ್ರಿ ಊಟಕ್ಕೆ ಲೈಟ್ & ಹೆಲ್ದಿ ಓಟ್ಸ್ ಖಿಚಡಿ ಮಾಡಿ ನೋಡಿ

ರಾತ್ರಿ ಊಟಕ್ಕೆ ಹೊಟ್ಟೆ ತುಂಬಬೇಕು, ಆದರೆ ಲೈಟ್ ಆಗಿರ್ಬೇಕು ಅಂದ್ರೆ ಓಟ್ಸ್ ಖಿಚಡಿ ಬೆಸ್ಟ್. ಇದು ಲೈಟ್‌, ಟೇಸ್ಟಿ ಮತ್ತು ಆರೋಗ್ಯಕರ. ಪ್ರೋಟೀನ್‌, ಫೈಬರ್‌ ಹಾಗೂ ತರಕಾರಿಗಳ ಪೌಷ್ಟಿಕಾಂಶ ಒಂದೇ ಬಟ್ಟಲಿನಲ್ಲಿ ಸಿಗುವುದರಿಂದ ಡಯಟ್‌ ಫಾಲೋ ಮಾಡುವವರಿಗೂ ಇದು ಸೂಪರ್ ಡಿನ್ನರ್ ರೆಸಿಪಿ.

ಬೇಕಾಗುವ ಪದಾರ್ಥಗಳು:

ಅರ್ಧ ಕಪ್ ಓಟ್ಸ್, ಕಾಲು ಕಪ್ ಮೂಂಗ್ ದಾಲ್‌, ಒಂದು ಸಣ್ಣ ಈರುಳ್ಳಿ, ಒಂದು ಕ್ಯಾರೆಟ್‌, ಸ್ವಲ್ಪ ಬಟಾಣಿ, ಒಂದು ಟೊಮೆಟೊ, ಒಂದು ಹಸಿಮೆಣಸು, ಅರ್ಧ ಟೀಸ್ಪೂನ್ ಜೀರಿಗೆ, ಸ್ವಲ್ಪ ಶುಂಠಿ ತುರಿ, ಚಿಟಿಕೆ ಇಂಗು, ಅರ್ಧ ಟೀಸ್ಪೂನ್ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಮಚ ತುಪ್ಪ ಅಥವಾ ಎಣ್ಣೆ, 2-3 ಕಪ್ ನೀರು, ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ:

ಮೊದಲು ಕುಕ್ಕರ್‌ನಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ, ಶುಂಠಿ, ಹಸಿಮೆಣಸು ಮತ್ತು ಇಂಗು ಹಾಕಿ ಒಗ್ಗರಣೆ ಕೊಡಿ. ನಂತರ ಈರುಳ್ಳಿ ಹಾಕಿ ಸ್ವಲ್ಪ ಹುರಿದು, ಕ್ಯಾರೆಟ್‌, ಬಟಾಣಿ, ಟೊಮೆಟೊ ಸೇರಿಸಿ 2 ನಿಮಿಷ ಬೇಯಿಸಿ. ಈಗ ತೊಳೆದ ಮೂಂಗ್ ದಾಲ್‌ ಮತ್ತು ಓಟ್ಸ್ ಸೇರಿಸಿ ಕಲಸಿ. ಅರಿಶಿನ, ಉಪ್ಪು ಹಾಗೂ ನೀರು ಹಾಕಿ ಕುಕ್ಕರ್‌ ಮುಚ್ಚಿ 2-3 ವಿಷಲ್ ಬರುವವರೆಗೆ ಬೇಯಿಸಿ.

ಕುಕ್ಕರ್‌ ತಣ್ಣಗಾದ ಬಳಿಕ ತೆರೆದು, ಮೇಲೆ ಕೊತ್ತಂಬರಿ ಸೊಪ್ಪು, ಸ್ವಲ್ಪ ನಿಂಬೆ ರಸ ಮತ್ತು ಒಂದು ಚಮಚ ತುಪ್ಪ ಹಾಕಿ ಬಿಸಿ ಬಿಸಿಯಾಗಿ ಸವಿಯಿರಿ.

Must Read