ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಹಿನ್ನಡೆ ಎದುರಾಗಿದೆ. ತಂಡದ ಸ್ಫೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಗಾಯದ ಸಮಸ್ಯೆಯಿಂದ ಇಂಗ್ಲೆಂಡ್ಗೆ ಮರಳಿದ್ದು, ಮುಂದಿನ ಪಂದ್ಯಗಳಲ್ಲಿ ಅವರ ಲಭ್ಯತೆ ಬಗ್ಗೆ ಅನಿಶ್ಚಿತತೆ ಮೂಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಸಾಲ್ಟ್ ಎಡಗೈ ಬೆರಳಿಗೆ ಗಾಯವಾಗಿತ್ತು. ಆರಂಭದಲ್ಲಿ ಸಣ್ಣ ಗಾಯವೆಂದು ಕಂಡಿದ್ದರೂ, ಸಮಸ್ಯೆ ಗಂಭೀರವಾಗಿರುವ ಕಾರಣ ಅವರು ಕಳೆದ ಕೆಲವು ಪಂದ್ಯಗಳಿಂದ ಕಣಕ್ಕಿಳಿದಿರಲಿಲ್ಲ. ಇದೀಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವೈದ್ಯಕೀಯ ಪರೀಕ್ಷೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ತವರಿಗೆ ಮರಳುವಂತೆ ಸೂಚಿಸಿದೆ.
ಇದನ್ನೂ ಓದಿ:
ಇಂಗ್ಲೆಂಡ್ನಲ್ಲಿ ಸ್ಕ್ಯಾನಿಂಗ್ ಮತ್ತು ಚಿಕಿತ್ಸೆ ಪೂರ್ಣಗೊಂಡ ಬಳಿಕ ವೈದ್ಯಕೀಯ ವರದಿ ಆಧರಿಸಿ ಮಾತ್ರ ಸಾಲ್ಟ್ಗೆ ಮತ್ತೆ ಐಪಿಎಲ್ ಆಡಲು ಅನುಮತಿ ಸಿಗಲಿದೆ.
ಈ ಬೆಳವಣಿಗೆ ಆರ್ಸಿಬಿ ಶಿಬಿರದಲ್ಲಿ ಆತಂಕ ಮೂಡಿಸಿದೆ. ಈ ಆವೃತ್ತಿಯಲ್ಲಿ 6 ಪಂದ್ಯಗಳಲ್ಲಿ 202 ರನ್ ಸಿಡಿಸಿ ಭರ್ಜರಿ ಫಾರ್ಮ್ ತೋರಿದ್ದ ಸಾಲ್ಟ್, ವಿರಾಟ್ ಕೊಹ್ಲಿಯೊಂದಿಗೆ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಅವರ ಗೈರುಹಾಜರಿ ಆರ್ಸಿಬಿ ಬ್ಯಾಟಿಂಗ್ ಬಲಕ್ಕೆ ಹೊಡೆತ ನೀಡಿದೆ.



