August 26, 2026
Wednesday, August 26, 2026
spot_img

RCBಯ ತೆರೆಮರೆಯ ಹೀರೋ: 18 ವರ್ಷ ಸೇವೆ ಸಲ್ಲಿಸಿದ ಫಿಸಿಯೋಗೆ ಭಾವುಕ ವಿದಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ ಮಹತ್ವದ ಪಂದ್ಯಕ್ಕೆ ಸಜ್ಜಾಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಶಿಬಿರದಲ್ಲಿ ಭಾವುಕ ಕ್ಷಣವೊಂದು ಗಮನ ಸೆಳೆದಿದೆ. ಹಲವು ವರ್ಷಗಳ ಕಾಲ ತಂಡದ ಆಟಗಾರರ ಫಿಟ್ನೆಸ್ ಬೆನ್ನೆಲುಬಾಗಿ ಕೆಲಸ ಮಾಡಿದ ಮಾಜಿ ಫಿಸಿಯೋ ಇವಾನ್ ಸ್ಪೀಚ್ಲಿಗೆ ಆರ್‌ಸಿಬಿ ವಿಶೇಷವಾಗಿ ಗೌರವ ಸಲ್ಲಿಸಿದೆ.

2008ರಲ್ಲಿ ತಂಡದೊಂದಿಗೆ ಪಯಣ ಆರಂಭಿಸಿದ್ದ ಇವಾನ್ ಸ್ಪೀಚ್ಲಿ, ಸುಮಾರು 18 ವರ್ಷಗಳ ಕಾಲ ಆಟಗಾರರ ಗಾಯ ನಿರ್ವಹಣೆ, ಫಿಟ್ನೆಸ್ ಮತ್ತು ಪುನಶ್ಚೇತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಕೊಡುಗೆ ತಂಡದ ಒಳಗಿನ ಯಶಸ್ಸಿನ ಕಥೆಯಲ್ಲಿ ಮೌನ ನಾಯಕನಂತಿತ್ತು. ಕಳೆದ ಸೀಸನ್ ಬಳಿಕ ಅವರು ಜವಾಬ್ದಾರಿಯಿಂದ ಹಿಂದೆ ಸರಿದರೂ, ಅವರ ಸೇವೆಯನ್ನು ಮರೆಯದ ಫ್ರಾಂಚೈಸಿ ಇದೀಗ ವಿಶೇಷ ಆಹ್ವಾನ ನೀಡಿ ಸನ್ಮಾನಿಸಿದೆ.

ಇದನ್ನೂ ಓದಿ:

ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ನಡೆದ ಗೌರವ ಸಮಾರಂಭದಲ್ಲಿ ವಿಶೇಷ ಉಡುಗೊರೆ ನೀಡಿ ಅವರಿಗೆ ವಿದಾಯ ಕೋರಲಾಯಿತು. ಈ ವೇಳೆ ಹಿರಿಯ ಆಟಗಾರರು ಕೂಡ ತಮ್ಮ ನೆನಪುಗಳನ್ನು ಹಂಚಿಕೊಂಡರು. ಹಲವು ಏರಿಳಿತಗಳ ನಡುವೆ ತಂಡದೊಂದಿಗೇ ನಿಂತಿದ್ದ ಇವಾನ್ ಸ್ಪೀಚ್ಲಿಯ ಸೇವೆ ಆರ್‌ಸಿಬಿ ಇತಿಹಾಸದಲ್ಲಿ ವಿಶೇಷ ಅಧ್ಯಾಯವಾಗಿ ಉಳಿಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !