May 4, 2026
Monday, May 4, 2026
spot_img

ತಮಿಳುನಾಡಿನಲ್ಲಿ ‘ಜನನಾಯಗನ್’ ಅಬ್ಬರ: ಸರ್ಕಾರ ರಚನೆಗೆ ಸಿಗಲಿದೆ ಯಾರ ಬೆಂಬಲ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯಕ್ಕೆ ದಾರಿ ತೆರೆದಿರುವ ಟಿವಿಕೆ ಪಕ್ಷ, ತನ್ನ ಮೊದಲ ಚುನಾವಣೆಯಲ್ಲೇ ಅಚ್ಚರಿಯ ಸಾಧನೆ ಮಾಡಿ ಅಧಿಕಾರದ ಅಂಚಿಗೆ ತಲುಪಿದೆ. ಬಹುಮತಕ್ಕೆ ಕೆಲವೇ ಸ್ಥಾನಗಳ ಕೊರತೆ ಎದುರಾಗಿರುವ ಹಿನ್ನೆಲೆ, ಇದೀಗ ವಿಜಯ್ ಮುಂದಿನ ರಾಜಕೀಯ ಹೆಜ್ಜೆ ಏನು ಎಂಬ ಕುತೂಹಲ ಹೆಚ್ಚಾಗಿದೆ.

234 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿವಿಕೆ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಹಾಗೂ ಮುನ್ನಡೆ ಸಾಧಿಸಿದ್ದು, ಸರ್ಕಾರ ರಚನೆಗೆ ಅಗತ್ಯವಿರುವ ಸಂಖ್ಯಾಬಲದ ಸಮೀಪದಲ್ಲಿದೆ. ಈ ಹಿನ್ನೆಲೆ, ಚುನಾವಣೋತ್ತರ ಮೈತ್ರಿಯ ಲೆಕ್ಕಾಚಾರಗಳು ವೇಗ ಪಡೆದಿವೆ. ಯಾವ ಪಕ್ಷಗಳು ವಿಜಯ್‌ಗೆ ಕೈಜೋಡಿಸಲಿವೆ ಎಂಬ ಚರ್ಚೆ ಜೋರಾಗಿದೆ.

ಇದನ್ನೂ ಓದಿ:

ಚುನಾವಣೆಗೆ ಮುನ್ನ ಪ್ರಮುಖ ಪಕ್ಷಗಳ ವಿರುದ್ಧ ಸ್ಪಷ್ಟ ನಿಲುವು ತಳೆದಿದ್ದ ವಿಜಯ್, ಸ್ವತಂತ್ರ ರಾಜಕೀಯ ದಾರಿಯನ್ನೇ ಆರಿಸಿಕೊಂಡಿದ್ದರು. ಇದೇ ಕಾರಣಕ್ಕೆ ದೊಡ್ಡ ಪಕ್ಷಗಳೊಂದಿಗೆ ನೇರ ಮೈತ್ರಿ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಆದರೆ ಸಣ್ಣ ಹಾಗೂ ಪ್ರಾದೇಶಿಕ ಪಕ್ಷಗಳ ಬೆಂಬಲದಿಂದ ಸರ್ಕಾರ ರಚನೆ ಸಾಧ್ಯವಾಗುವ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಮೊದಲ ಹೆಜ್ಜೆಯಲ್ಲೇ ಭಾರೀ ಪ್ರಭಾವ ಮೂಡಿಸಿರುವ ಟಿವಿಕೆ, ಈಗ ಕಿಂಗ್‌ಮೇಕರ್ ಅಲ್ಲ, ನೇರವಾಗಿ ಅಧಿಕಾರದ ಕೇಂದ್ರಬಿಂದುವಾಗುವ ಅವಕಾಶದತ್ತ ಸಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !