May 6, 2026
Wednesday, May 6, 2026
spot_img

ತಮಿಳುನಾಡಿನಲ್ಲಿ ನಟ ವಿಜಯ್ ಗೆ ಕಾಂಗ್ರೆಸ್ ಬೆಂಬಲ: ನಾಳೆ ಚೆನ್ನೈನಲ್ಲಿ ಅಂತಿಮ ಘೋಷಣೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧತೆ ನಡೆಸುತ್ತಿದ್ದು, ಇದಕ್ಕಾಗಿ ಸ್ಪಷ್ಟ ಬಹುಮತ ಪಡೆಯಲು ಕಾಂಗ್ರೆಸ್​ ನ ಬೆಂಬಲ ಕೋರಿದೆ.

ಚುನಾವಣೆಯಲ್ಲಿ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆದ್ದಿದೆ. ಇದರಿಂದ ಸರ್ಕಾರ ರಚಿಸಲು 118 ಶಾಸಕರು ಬೇಕಿದೆ. ಉಳಿದ 10 ಸ್ಥಾನಗಳಿಗೆ ಮತ್ತೊಂದು ಪಕ್ಷದ ಬೆಂಬಲ ಅಗತ್ಯವಿದ್ದು, ಹಾಗಾಗಿ ಕಾಂಗ್ರೆಸ್ ಬೆಂಬಲವನ್ನು ಕೋರಿದ್ದಾರೆ.

ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಟಿವಿಕೆ ಮುಖ್ಯಸ್ಥ ಮತ್ತು ನಟ ವಿಜಯ್ ಹೊಸ ಸರ್ಕಾರ ರಚಿಸಲು ಬೆಂಬಲ ಕೋರಿದ್ದಾರೆ. ಹೀಗಾಗಿ ನಾಳೆ ತಮಿಳುನಾಡು ಕಾಂಗ್ರೆಸ್ ಘಟಕವು ಚೆನ್ನೈನಲ್ಲಿ ಸಭೆ ನಡೆಸಲಿದ್ದು, ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಟಿವಿಕೆಗೆ ಬೆಂಬಲಿಸುವ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ಈ ಸಂಬಂಧ ಅಂತಿಮ ಸುತ್ತಿನ ಸಭೆ ನಾಳೆ ನಡೆಯಲಿದೆ.

https://hosadigantha.com/category/national/#google_vignette

ಎಲ್ಲವು ಸುಸೂತ್ರವಾಗಿ ನಡೆದರೆ, ಪ್ರಮಾಣವಚನ ಸಮಾರಂಭವು ಮೇ 7ರಂದು ನಡೆಯಲಿದೆ ಎಂದು ವರದಿಯಾಗಿದೆ. ಹಿರಿಯ ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಮತ್ತು ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಭಾಗವಹಿಸುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !