May 6, 2026
Wednesday, May 6, 2026
spot_img

Gold Rate Today: ಸತತ ಕುಸಿತದ ಬೆನ್ನಲ್ಲೇ ಮತ್ತೆ ಏರಿಕೆ ಕಂಡ ಬಂಗಾರ, ಬೆಳ್ಳಿ ಬೆಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ಸತತವಾಗಿ ಇಳಿಕೆ ಕಾಣುತ್ತಿದ್ದ ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಇಂದು ದಿಢೀರ್ ಏರಿಕೆ ಕಂಡಿವೆ. ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತೆ ಚೇತರಿಸಿಕೊಂಡಿದ್ದು, ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಇದು ಕೊಂಚ ಆತಂಕ ತಂದಿದೆ.

ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಮ್ ಚಿನ್ನದ ಬೆಲೆ 195 ರೂಪಾಯಿಗಳಷ್ಟು ಹೆಚ್ಚಳವಾಗಿದೆ. ಇದರೊಂದಿಗೆ 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ದರದಲ್ಲಿ ಗಣನೀಯ ಬದಲಾವಣೆ ಕಂಡುಬಂದಿದೆ. ವಿದೇಶಿ ಮಾರುಕಟ್ಟೆಗಳಲ್ಲಿನ ಏರಿಳಿತಗಳು ಹಾಗೂ ಹೂಡಿಕೆಯ ಬೇಡಿಕೆ ಹೆಚ್ಚಾಗಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಇಂದಿನ ಚಿನ್ನದ ದರ ವಿವರ (10 ಗ್ರಾಮ್‌ಗೆ):

22 ಕ್ಯಾರಟ್ ಚಿನ್ನ: 1,38,700 ರೂಪಾಯಿ.

24 ಕ್ಯಾರಟ್ (ಅಪರಂಜಿ) ಚಿನ್ನ: 1,51,310 ರೂಪಾಯಿ.

ಅಪರಂಜಿ ಚಿನ್ನದ ಬೆಲೆ ಈಗ ಮತ್ತೆ 1.50 ಲಕ್ಷ ರೂಪಾಯಿಗಳ ಗಡಿ ದಾಟಿ ಮುನ್ನುಗ್ಗುತ್ತಿರುವುದು ಗಮನಾರ್ಹ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ದರ ಚಾಲ್ತಿಯಲ್ಲಿದೆ.

ಚಿನ್ನದ ಹಾದಿಯಲ್ಲೇ ಸಾಗಿರುವ ಬೆಳ್ಳಿ ಬೆಲೆಯೂ ಇಂದು ಏರಿಕೆ ಕಂಡಿದೆ. ಪ್ರತಿ ಗ್ರಾಮ್‌ ಬೆಳ್ಳಿಯಲ್ಲಿ 10 ರೂಪಾಯಿ ಹೆಚ್ಚಳವಾಗಿದ್ದು, ಸದ್ಯ 100 ಗ್ರಾಮ್ ಬೆಳ್ಳಿ ಬೆಲೆ 26,500 ರೂಪಾಯಿ ತಲುಪಿದೆ. ತಮಿಳುನಾಡು ಮತ್ತು ಕೇರಳದ ಕೆಲವು ನಗರಗಳಲ್ಲಿ ಬೆಳ್ಳಿ ಬೆಲೆ 27,000 ರೂಪಾಯಿಗಳವರೆಗೂ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !